ಚಿಕ್ಕಮಗಳೂರಿಗೆ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ, ಬಸ್ಸ್ ಹಾಗೂ ಆಲ್ಟೋ ಕಾರಿನ ನಡುವೆ ಭೀಕರ ಅಪಘಾತ ; ಸ್ಥಳದಲ್ಲೇ ಐವರ ಸಾವು

 

ಸುದ್ದಿ,🖋ವೀರಮಣಿ




ಬೆಂಗಳೂರಿನಿಂದ ಚಿಕ್ಕಮಗಳೂರು ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್ಟಿಸಿ ಬಸ್ ಹಾಗೂ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಐವರು ದುರ್ಮರಣವನ್ನಪ್ಪಿದ್ದಾರೆ .



ಹಾಸನ ಜಿಲ್ಲೆಯ ಬೇಲೂರು ರಸ್ತೆಯ ಸಂಕೇನಹಳ್ಳಿ ಬಳಿ ಈ ಅಪಘಾತ ಸಂಭವಿಸಿದ್ದು ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿಯಾದ ಪರಿಣಾಮ ಕಾರಿನಲ್ಲಿದ್ದ ಐವರೂ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ .




ಮೃತಪಟ್ಟವರನ್ನು ಬೇಲೂರು ಮೂಲದವರೆಂದು ಗುರುತಿಸಲಾಗಿದ್ದು ಎಲ್ಲಾ ಮೃತದೇಹಗಳನ್ನು ಬೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿರಿಸಲಾಗಿದೆ . ಮೃತರನ್ನು ಹಸನ್ ( 20 ) ಅಕ್ಕಲ್ ( 19 ) , ಜಿಲಾನಿ ( 19 ) , ತೋಯಿದ್ ( 18 ) , ಕೈಫ್ ( 18 ) ಎಂದು ಗುರುತಿಸಲಾಗಿದೆ .



ಈ ಭೀಕರ ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳೀಯರು , ಪೊಲೀಸರು ವಾಹನ ಸವಾರರು ಕಾರಿನಲ್ಲಿದ್ದವರನ್ನು ಹೊರತೆಗೆಯಲು ಬಹಳಷ್ಟು ಪ್ರಯತ್ನಪಟ್ಟಿದ್ದಾರೆ ಆದರೆ ಕಾರು ಸಂಪೂರ್ಣ ಜಖಂ ಆದ ಕಾರಣ ಕಾರಿನಲ್ಲಿದ್ದವರನ್ನು ಹೊರತೆಗೆಯಲು ಹರಸಾಹಸವನ್ನೇ ಸ್ಥಳೀಯರು ಮಾಡಿದ್ದಾರೆ . ಮೃತಪಟ್ಟವರೆಲ್ಲರೂ ಯುವಕರೇ ಆಗಿದ್ದು ಮಕ್ಕಳನ್ನು ಕಳೆದುಕೊಂಡ ಪೋಷಕರಂತೂ ಅತ್ಯಂತ ದುಃಖದಲ್ಲಿದ್ದಾರೆ . ಅಪಘಾತ ಹೊಂದಿದ ಆಲ್ಟೋ ಕಾರ್ ಸಂಪೂರ್ಣ ಜಖಂಗೊಂಡಿದೆ .







Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?