ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ವತಿಯಿಂದ ನಡೆದ ಬರಡು ರಾಸುಗಳು ಉಚಿತ ಚಿಕಿತ್ಸಾ
ವರದಿ:-🖋 ವೀರಮಣಿ,
ಬಸರೀಕಟ್ಟೆ:- ಗೋವುಗಳಿಗೆ ಭಾರತೀಯ ಸಂಸ್ಕೃತಿಯಲ್ಲಿ ತಾಯಿಯ ಸ್ಥಾನವನ್ನು ನೀಡಲಾಗಿದೆ , ಗೋವು ತನ್ನ ಸಂಪೂರ್ಣ ಜೀವನವನ್ನು ಸಕಲ ಜೀವರಾಶಿಯ ಉದ್ಧಾರಕ್ಕಾಗಿ ಮುಡಿಪಾಗಿಸಿದೆ ಎಂದು ಬಸರೀಕಟ್ಟೆಯ ಸೋಮೇಶ್ವರಖಾನ್ ಮೈದಾನದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ವತಿಯಿಂದ ನಡೆದ ಬರಡು ರಾಸುಗಳು ಉಚಿತ ಚಿಕಿತ್ಸಾ ಶಿಬಿರ ಮತ್ತು ವಿಚಾರ ಗೋಷ್ಠಿಯನ್ನು ಉದ್ಘಾಟಿಸಿ ಮಾತಾನಾಡಿದ ಅತ್ತಿಕೊಡಿಗೆ ಗ್ರಾ ಪಂ ಅಧ್ಯಕ್ಷೆ ಅಶ್ವಿನಿ ಕೆ ಮಣಿಕಂಠನ್ ಹೇಳಿದರು
ಮಾನವನು ಹಸುವಿನಿಂದ ಎಲ್ಲಾ ರೀತಿಯ ಉಪಯೋಗವನ್ನು ಪಡೆದುಕೊಳ್ಳುತ್ತಾನೆ ಹಾಲು , ಸಗಣಿ ಗೊಬ್ಬರದಿಂದ , ಗೋಮೂತ್ರದಿಂದ ರೋಗ ನಿರೋಧಕಗಳು , ಇತ್ತೀಚೆಗೆ ಕ್ಯಾನ್ಸರ್ ನಂತಹ ಕಾಯಿಲೆಗಳಿಗೆ ಕೂಡ ಔಷಧಗಳ ಆವಿಷ್ಕಾರಗಳು ನಡೆಯುತ್ತಿವೆ ಇಂತಹ ಗೋಮಾತೆಯನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ , ನಮ್ಮ ನಿತ್ಯ ಜೀವನದಲ್ಲಿ ಗೋವುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ ಹಾಗೆ ಇತರೆ ಸಾಕು ಪ್ರಾಣಿಗಳು ಕೂಡ ಮನಸ್ಸಿಗೆ ಮುದ ನೀಡುತ್ತವೆ ,ವಿಶೇಷವಾಗಿ ಗ್ರಾಮೀಣ ಮಲೆನಾಡು ಪ್ರದೇಶಗಳಲ್ಲಿ ಸಾಕು ಪ್ರಾಣಿಗಳಿಗೆ ಉತ್ತಮ ಪೌಷ್ಟಿಕಾಹಾರ ನೀಡಬೇಕು ಎಂದರು .
ಜಯಪುರದ ಪಶು ವೈದೈರಾದ ಡಾ. ಪವಿತ್ರರವರು ವಿಚಾರ ಗೋಷ್ಠಿಯಲ್ಲಿ ಮಾತಾನಾಡಿ ಮನುಷ್ಯರಿಗೆ ಪ್ರಾಣಿಗಳಿಂದ ಸುಮಾರು 150 ಕ್ಕೂ ಹೆಚ್ಚು ಖಾಯಿಲೆಗಳು ಬರುವ ಪ್ರಾಣಿ ಜನ್ಯ ರೋಗಗಳಿವೆ ಎಂದು ಮಾಹಿತಿ ನೀಡಿದರು. ರೇಬಿಸ್, ಲೆಪ್ಟೋಸ್ಪೈರೋಸಿಸ್( ಇಲಿ ಜ್ವರ), ಬ್ರುಸೆಲ್ಲೋಸಿಸ್, ಹೈಡಾಟಿಡೋಸಿಸ್ ಮುಂತಾದ ಕಾಯಿಲೆಗಳ ಇತಿಹಾಸ, ಹರಡುವಿಕೆ, ಮುಂಜಾಗ್ರತೆ ಕ್ರಮ, ತಡೆಗಟ್ಟುವಿಕೆ ಬಗ್ಗೆ ಸವಿಸ್ಥಾರವಾಗಿ ಮಾಹಿತಿ ನೀಡಿದರು. ಪ್ರಾಣಿಗಳ ಆರೋಗ್ಯ ರಕ್ಷಣೆ ನಮ್ಮೆಲ್ಲರ ಹೊಣೆ ಅದರಿಂದ ನಮ್ಮ ಆರೋಗ್ಯ ರಕ್ಷಣೆ ಕೂಡ ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದರು.
ಶ್ವಾನಗಳಿಗೆ ಹಾಗೂ ಗೋವುಗಳಿಗೆ ರೋಗನಿರೋಧಕ ಚುಚ್ಚುಮದ್ದುಗಳನ್ನು ಹಾಗೂ ಚಿಕಿತ್ಸೆಯನ್ನು ನೀಡಲಾಯಿತು
ಮೇರುತಿ ಗೋ ಪ್ರೇಮಿ ಬಳಗದ ಅಧ್ಯಕ್ಷರಾದ ಸುಧೀಂದ್ರ ರವರ ಗೋಸೇವೆಗೆ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಸಂದರ್ಭದಲ್ಲಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ , ಬಸರೀಕಟ್ಟೆ ಪಶು ವೈದ್ಯಾಧಿಕಾರಿ ಡಾ ಮಣಿಕಾಂತ್ ,ಕೆಡಿಪಿ ಸದಸ್ಯ ಮಣಿಕಂಠನ್ ಕಂದಸ್ವಾಮಿ , ಗ್ರಾ ಪಂ ಸದಸ್ಯರಾದ ಆರ್ ರಾಘವೇಂದ್ರ , ಚೈತ್ರ , ಟಿಎಪಿಸಿಎಮ್ಎಸ್ ಕೊಪ್ಪದ ಉಪಾಧ್ಯಕ್ಷರಾದ ನಟರಾಜ್ ಹುತ್ತಿನಗದ್ದೆ , ಅತ್ತಿಕೊಡಿಗೆ ಸಹಕಾರಿ ನಿರ್ದೇಶಕ ಅರುಣ್ ಕುಮಾರ್ , ಸ್ಥಳೀಯರಾದ ಶರಣ್ ಡಿ ಕುನಃ , ಚೇತನ್ , ರವಿ , ಪ್ರವೀಣ್ , ಡಿಎಸ್ಎಸ್ ಸತೀಶ್ , ವೆಂಕಟೇಶ್ , ಸಿಬ್ಬಂದಿಗಳಾದ ಶಂಕರ , ರಾಜಪ್ಪ ಹಾಗೂ ಅನೇಕರು ಇದ್ದರು .
Comments
Post a Comment