ಬಾಲಕನನ್ನು ಬೆತ್ತಲು ಗೊಳಿಸಿ ಹಲ್ಲೆ ಮಾಡಿದ ಘಟನೆ,ಓರ್ವನ ಬಂಧನ,ವಿಜಯಪುರ,
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಸಮೀಪದ ವಡ್ಡೋಡಗಿ ಗ್ರಾಮದಲ್ಲಿ ಕ್ಷುಲ್ಲಕ ವಿಷಯಕ್ಕೆ ಬಾಲಕನನ್ನು ಬೆತ್ತಲುಗೊಳಿಸಿ ಬಣ್ಣ ಸುರಿದು ಚಿತ್ರಹಿಂಸೆ ನೀಡಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಶಾಸಕ ಪ್ರಕಾಶ್ ರಾಥೋಡ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಾಲಕನ ಮೇಲೆ ದೌರ್ಜನ್ಯವೆಸಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಕೂಡಲೇ ಜಿಲ್ಲಾ ಪೋಲಿಸರು ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಕರಣದ ವಿವರ,
ಊರಿನ ಪ್ರಭಾವಿ ಸುಮುದಾಯದ ವ್ಯಕ್ತಿಯೊಬ್ಬರಿಗೆ ಬೈದಿದ್ದಾರೆ ಎಂದು ಆರೋಪಿಸಿ 12 ವರ್ಷದ ಬಾಲಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ, ಬೆತ್ತಲೆಗೊಳಿಸಿ, ಗುಪ್ತಾಂಗಕ್ಕೆ ಬಣ್ಣ ಹಾಗೂ ಸುಟ್ಟ ಆಯಿಲ್ ಎರಚಿ, ವಿಕೃತವಾಗಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಸಮೀಪದ ವಡ್ಡೋಡಗಿ ಗ್ರಾಮದಲ್ಲಿ ಜರುಗಿತ್ತು.
ಘಟನೆಯು ಹೋಳಿ ಹಬ್ಬದ ಮರುದಿನ ಮಾರ್ಚ್ 18 ರಂದು ನಡೆದಿತ್ತು. ಆದರೆ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ. ಇದರ ನಂತರ ಬಾಲಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಈ ದೂರನ್ನು ಆಧರಿಸಿ ಆರೋಪಿ ಹಣಮಂತರಾಯನನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.


Comments
Post a Comment