ಉಡುಪಿ, ಕೋಡಿಯ ಸಮುದ್ರದಲ್ಲಿ ಮತ್ತೇ ನೀಲಿ ಅಲೆಗಳು,
ಉಡುಪಿ: ಇಲ್ಲಿನ ಸಮೀಪದ ಕೋಡಿ ಸಮುದ್ರದಲ್ಲಿ ನೀಲಿ ಅಲೆಗಳು ತೀರಕ್ಕೆ ಅಪ್ಪಳಿಸಿದ್ದು, ಸ್ಥಳೀಯರು, ಮೀನುಗಾರರು ಅಪರೂಪದ ಈ ವಿದ್ಯಮಾನವನ್ನು ಕಣ್ತುಂಬಿಕೊಂಡಿದ್ದಾರೆ.
2020ರಲ್ಲಿ ಇದೇ ರೀತಿಯ ದೃಶ್ಯ ಕೋಡಿ, ಗಂಗೊಳ್ಳಿ, ಬೀಜಾಡಿ ಪರಿಸರದಲ್ಲಿ ಕಂಡುಬಂದಿತ್ತು. ಗಂಗೊಳ್ಳಿ ಗ್ರಾಮದ ಮಡಿ ಎಂಬಲ್ಲಿ ಹಸಿರು ಅಲೆಗಳ ಅಪ್ಪಳಿಸುವಿಕೆ ನಾಗರಿಕರಲ್ಲಿ ಕುತೂಹಲ ಮೂಡಿಸಿತ್ತು. 2 ವರ್ಷ ನಂತರ ಮತ್ತೆ ಕೋಡಿ ಬೀಚ್‌ನಲ್ಲಿ ನೀಲಿ ಅಲೆಗಳು ಕಂಡುಬಂದಿವೆ. ಕೋಡಿಯಿಂದ ಬೀಜಾಡಿವರೆಗಿನ ಕಡಲತೀರದಲ್ಲಿ ನೀಲಿ ಅಲೆಗಳು ಕಂಡುಬಂದಿವೆ.
ಕಡಲಿನ ಅಲೆಗಳು ಕರಾವಳಿಯಲ್ಲಿ ವೈವಿಧ್ಯಮಯ ವರ್ಣಕ್ಕೆ ತಿರುಗುತ್ತಿರುವುದು ಕುತೂಹಲ ಮೂಡಿಸಿರುವ ಜತೆಗೆ ಇದರ ವೈಜ್ಞಾನಿಕ ಅಧ್ಯಯನ ನಡೆಸಬೇಕೆಂಬ ಆಗ್ರಹ ಕೇಳಿಬಂದಿದೆ. 2020ರ ಈಚೆಗೆ ನೀಲಿ, ಹಸಿರು ಮತ್ತು ಬೂದು ವರ್ಣದ ಅಲೆಗಳನ್ನು ಸ್ಥಳೀಯರು ಗುರುತಿಸಿದ್ದಾರೆ.
ಕಡಲಲ್ಲಿ ಬೂದು ಬಣ್ಣದ ರಸ್ತೆ ಮಾದರಿ ಕಂಡಿದ್ದಾರೆ. ಕಡಲು ಸೇರುತ್ತಿರುವ ತ್ಯಾಜ್ಯಗಳ ದುಷ್ಪರಿಣಾಮದಿಂದ ಅಲೆಗಳು ಬಣ್ಣ ಕಂಡುಕೊಳ್ಳುತ್ತಿರಬಹುದೆ,? ಅಥವಾ ಬೇರೆ ಯಾವುದಾದರೂ ನಿಖರ ಕಾರಣವಿರಬಹುದೆ ಎಂಬ ಬಗ್ಗೆ ಅಧ್ಯಯನ ನಡೆಯಬೇಕು ಎಂಬ ಆಗ್ರಹ ಕೇಳಿಬಂದಿದೆ. ಅಲೆಗಳು ನೀಲಿ ವರ್ಣಕ್ಕೆ ತಿರುಗಿರುವುದು ಕೌತುಕ ಸೃಷ್ಟಿಸಿದೆ. ಕೋಡಿಯಿಂದ ಬೀಜಾಡಿವರೆಗಿನ ಬೀಚ್‌ನಲ್ಲಿ ನೀಲಿ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿರುವ ನೋಟ ಮೋಹಕತೆಯ ಜತೆಯಲ್ಲಿ ಗಾಬರಿ ಮೂಡಿಸಿದೆ.


Comments
Post a Comment