"ಕಲಾ ಶ್ರೇಷ್ಠ " ಪ್ರಶಸ್ತಿಗೆ ಜನಪದ ಕಲಾವಿದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಆಯ್ಕೆ
ಗದಗ. ಜಗದ್ಗುರು ಶ್ರೀ ಶಿವಶಕ್ತಿ ಪೀಠ (ರಿ) ಸುಕ್ಷೇತ್ರ ಇರಕಲ್ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಸಾಧಕರಿಗೆ ಕೊಡಮಾಡಲ್ಪಡುವ 2022ನೇ ಸಾಲಿನ "ಕಲಾ ಶ್ರೇಷ್ಠ ಪ್ರಶಸ್ತಿಗೆ ದೇಶ ವಿದೇಶಗಳಲ್ಲಿ ನಾಡಿನ ಜನಪದ ಕಂಪನ್ನು ಪಸರಿಸಿದ 'ಜನಪದ ಸಂಜೀವಿನಿ' ಖ್ಯಾತಿಯ ಬಹುಮುಖ ಪ್ರತಿಭೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಕಲಾವಿದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಅವರನ್ನು ಆಯ್ಕೆ ಮಾಡಲಾಗಿದೆ.
ಜೀವಮಾನದ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ಧು 11ನೇ ಮಾರ್ಚ್ 2022ರಂದು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಸುಕ್ಷೇತ್ರ ಇರಕಲ್ ಮಠದ ಜಾತ್ರಾ ಮಹೋತ್ಸವದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ-9449629938.9632201971.
Comments
Post a Comment