ಬಸರೀಕಟ್ಟೆಯಲ್ಲಿ ಡಾ,ಅಂಬೇಡ್ಕರ್ ರವರ 131ನೇ ಜನ್ಮ ಜಯಂತಿ ಆಚರಣೆ,
ಡಾ. ಬಿ. ಆರ್. ಅಂಬೇಡ್ಕರ್... ಸಮಾನತೆಯ ಹರಿಕಾರ, ಸಂವಿಧಾನ ಶಿಲ್ಪಿ, ಹೊಸ ಭಾರತದ ನಿರ್ಮಾತೃ... ದೇಶ ಕಂಡ ಮಹಾನ್ ಚೇತನ ಇವರು. ಇಡೀ ಭಾರತಕ್ಕೆ ಸ್ಫೂರ್ತಿ ತುಂಬಿದ, ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ಮಾರ್ಗದರ್ಶಿ. ಮಹಿಳಾ ಸಮಾನತೆ, ಪ್ರಗತಿಯ ಕನಸು ಕಂಡ ನಾಯಕ. ಇಂತಹ ಮೇರು ವ್ಯಕ್ತಿತ್ವದ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನವನ್ನು ಸ್ಮರಿಸಿ ಅವರ ಆದರ್ಶಗಳನ್ನು ಪಾಲಿಸುವುದು ಪ್ರತಿ ನಾಗರಿಕನ ಕರ್ತವ್ಯ ಎಂದು ಬಸರೀಕಟ್ಟೆಯಲ್ಲಿ ನಡೆದ ಡಾ ಅಂಬೇಡ್ಕರ್ ರವರ 131 ನೇ ಜನ್ಮ ಜಯಂತಿಯಲ್ಲಿ ಕೆಡಿಪಿ ಸದಸ್ಯ ಮಣಿಕಂಠನ್ ಕಂದಸ್ವಾಮಿ ಹೇಳಿದರು .
ಛಲದಿಂದ ಭವ್ಯ ಭಾರತದ ಕನಸು ಕಾಣುತ್ತಾ ಕಷ್ಟದ ನಡುವೆಯೂ ಬೆಳೆದ ಅಂಬೇಡ್ಕರ್ ಅವರು ನಮ್ಮ ದೇಶದ ಅಪೂರ್ವ ನಾಯಕರಲ್ಲಿ ಒಬ್ಬರಾದರು, ಅದೆಷ್ಟೋ ಜನರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು, ಸಂವಿಧಾನ ಶಿಲ್ಪಿಯಾಗಿ ರೂಪುಗೊಂಡಿದ್ದರು. ಇಂತಹ ಮಹಾನ್ ಚೇತನಕ್ಕೆ ರಾಷ್ಟ್ರದ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿಸಲಾಯಿತು , ಅವರ ಅಂತಿಮ ಸಂಸ್ಕಾರಕ್ಕೂ ಆಗಿನ ಸರ್ಕಾರ ಕನಿಷ್ಠ ವ್ಯವಸ್ಥೆಯನ್ನು ಮಾಡದೆ ಈ ದೇಶದ ಸಂವಿದಾನ ಶಿಲ್ಪಿಗೆ ಅವಮಾನ ಮಾಡಿತು ದೇಶದ ಸರ್ವೋತ್ತಮ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಲು ಅಟಲ್ ಜಿ ಯವರು ಪ್ರಧಾನಿಯಾಗಬೇಕಾಯಿತು . ಹುಟ್ಟಿನಿಂದ ಸಾವಿನವರೆಗೂ ಹೋರಾಟವನ್ನೇ ಮಾಡಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾದವರು ಅಂಬೇಡ್ಕರ್ ಅವರು ಎಂದರು .
ಅತ್ತಿಕೊಡಿಗೆ ಗ್ರಾ ಪಂ ಸದಸ್ಯರಾದ ಆರ್ ರಾಘವೇಂದ್ರ ಭಟ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಾಶಯ ಕೋರಿದರು . ಸಂದರ್ಭದಲ್ಲಿ ಗ್ರಾ ಪಂ ಸದಸ್ಯ ನಟರಾಜ್ , ಡಿಎಸ್ಎಸ್ ಮುಖಂಡ ಹೆಚ್ ಎಲ್ ರವಿ , ಮಾಜಿ ಅಧ್ಯಕ್ಷ ಪುಟ್ಟ , ಬಿಜೆಪಿ ಮುಖಂಡರಾದ ಗಂಗಾ , ಶಿವಪ್ರಸಾದ್ , ಪದ್ಮನಾಭ , ಚೇತನ್ , ಸೀತೆಗೌಡ , ಡಾ ಅರುಣ್ ಹಾಗೂ ಅನೇಕರು ಉಪಸ್ಥಿತರಿದ್ದರು.
🖊️ವರದಿ:-ವೀರಮಣಿ



Comments
Post a Comment