ರಾಜ್ಯ ಮಹಿಳಾ ಟಿ -20 ಕ್ರಿಕೆಟ್ ತಂಡಕ್ಕೆ ಅದಿತಿ ಆರ್, ಆಯ್ಕೆ
ಶಿವಮೊಗ್ಗ , ಭಾರತೀಯ ಮಹಿಳಾ ಕ್ರಿಕೆಟ್ ತಂಡದ ವೇದ ಕೃಷ್ಣಮೂರ್ತಿ ನೇತೃತ್ವದಲ್ಲಿ ಕರ್ನಾಟಕ ಮಹಿಳಾ ಟಿ -೨೦ ಕ್ರಿಕೆಟ್ ತಂಡಕ್ಕೆ ಶಿವಮೊಗ್ಗದ ಪ್ರತಿಭಾನ್ವಿತ ಮಹಿಳಾ ಕ್ರಿಕೆಟ್ ಕ್ರೀಡಾಪಟು ಕು || ಅದಿತಿ ರಾಜೇಶ್ ಆಯ್ಕೆಯಾಗಿರುತ್ತಾರೆ . ಇವರು ಏ .೧೮ ರಿಂದ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಹಿರಿಯ ಮಹಿಳಾ ಟಿ -೨೦ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ .
ಇವರು ಡಿ.ವಿ.ಎಸ್ . ವಿನೋಬನಗರ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದು , ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣದಲ್ಲಿ ೮ ವರ್ಷಗಳಿಂದ ಕ.ಕ್ರೀ.ಪಾ.ದ ಕ್ರಿಕೆಟ್ ತರಬೇತುದಾರ ಪಿ.ವಿ.ನಾಗರಾಜ್ ಬಳಿ ತರಬೇತಿ ಪಡೆಯುತ್ತಿದ್ದಾರೆ .
ನಗರಕ್ಕೆ ಕೀರ್ತಿ ತಂದ ಕು || ಅದಿತಿಯವರಿಗೆ ಡಿ.ಎಸ್ . ಅರುಣ್ , ಕೆ.ಎಸ್.ಸಿ.ಎ. ವಲಯ ಸಂಚಾಲಕರು , ಯು.ಸ. & ಕ್ರೀ.ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು , ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಅಭಿನಂದಿಸಿದರು,

Comments
Post a Comment