ಮೇಕೆಯೊಂದಿಗೆ ವಿವಾಹ,ವಿಚಿತ್ರವಾದರು ಸತ್ಯ,!
ಆಂಧ್ರಪ್ರದೇಶ:- ಜ್ಯೋತಿಷಿಯ ಮಾತನ್ನು ನಂಬಿ ಯುವಕನೋರ್ವ ಮೇಕೆಯೊಂದಿಗೆ ಮದುವೆಯಾದ ವಿಚಿತ್ರ ಘಟನೆ ನೆರೆಯ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ.
ಕೃಷ್ಣಾ ಜಿಲ್ಲೆಯ ನೂಜಿವೀಡು ಮೂಲದ ಯುವಕನೊಬ್ಬ ಮದುವೆಯಾಗಲು ಕನ್ಯೆ ಹುಡುಕಲು ಸಿದ್ಧತೆ ನಡೆಸಿದ್ದ. ಅದಕ್ಕಾಗಿ ಮನೆಯ ಹಿರಿಯರು ಜ್ಯೋತಿಷಿ ಬಳಿ ಜಾತಕ ತೆಗೆದುಕೊಂಡು ಹೋಗಿದ್ದು, ಆಗ ಜ್ಯೋತಿಷಿಯು ಹುಡುಗನಿಗೆ ಎರಡು ಮದುವೆಗಳು ಆಗುವ ಸಾಧ್ಯತೆಗಳಿವೆ. ಹೀಗಾಗಿ ಮೊದಲ ಬಾರಿಗೆ ಆತನಿಗೆ ಮೇಕೆಯೊಂದಿಗೆ ವಿವಾಹ ಮಾಡಿಸಿದರೆ ದೋಷವು ಪರಿಹಾರವಾಗುತ್ತದೆ ಎಂದು ಸಲಹೆ ನೀಡಿದ್ದರು ಎಂದು ತಿಳಿದುಬಂದಿದೆ.
ಜ್ಯೋತಿಷಿಯ ಮಾತನ್ನು ನಂಬಿ ಯುವಕ ಮೇಕೆಯೊಂದಿಗೆ ವಿವಾಹವಾಗಲು ಸಮ್ಮತಿ ಸೂಚಿಸಿದ್ದಾನೆ. ಅದರಂತೆ ವಿವಾಹಕ್ಕೆ ಎಲ್ಲ ಸಿದ್ಧತೆ ನಡೆಸಿದ ಆತನ ಮನೆಯವರು, ನೂಜಿವೀಡು ನವಗ್ರಹ ದೇವಸ್ಥಾನದಲ್ಲಿ ಮೇಕೆಯೊಂದಿಗೆ ವಿವಾಹ ಕಾರ್ಯ ನೆರವೇರಿಸಿದ್ದಾರೆ.
ಯುಗಾದಿ ಹಬ್ಬದಂದು ಪುರೋಹಿತರ ಸಮ್ಮುಖದಲ್ಲಿ ಸಂಪ್ರದಾಯದಂತೆ ಮೇಕೆಯೊಂದಿಗೆ ಯುವಕನ ವಿವಾಹ ನಡೆದಿದೆ.


Comments
Post a Comment