ವಿಮಾನದಲ್ಲಿ ಪ್ರಯಾಣಿಕನ ಮೊಬೈಲ್ ಸ್ಫೋಟ,!


 ನವದೆಹಲಿ: ಇಂಡಿಗೋದ ದಿಬ್ರುಗಢ್-ದೆಹಲಿ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್ ಫೋನ್‍ಗೆ ಬೆಂಕಿ ಹತ್ತಿಕೊಂಡಿತ್ತು. ಆದರೆ ಕ್ಯಾಬಿನ್ ಸಿಬ್ಬಂದಿ ಅಗ್ನಿಶಾಮಕ ಸಾಧನದ ಸಹಾಯದಿಂದ ಬೆಂಕಿಯನ್ನು ನಂದಿಸಿದ್ದಾರೆ. ಇದರಿಂದ ಸಂಭವಿಸಬೇಕಾದ ಭಾರೀ ಅನಾಹುತ ತಪ್ಪಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಿದ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅಧಿಕಾರಿಗಳು ಫ್ಲೈಟ್ 6ಇ 2037 ಅಸ್ಸಾಂನ ದಿಬ್ರುಗಢ್‍ನಿಂದ ದೆಹಲಿಗೆ ತೆರಳುತ್ತಿದ್ದಾಗ ಕ್ಯಾಬಿನ್ ಸಿಬ್ಬಂದಿಯೊಬ್ಬರು ಪ್ರಯಾಣಿಕರ ಫೋನ್‍ನಿಂದ ಬೆಂಕಿಯ ಕಿಡಿ ಮತ್ತು ಹೊಗೆ ಹೊರಗೆ ಹೋಗುತ್ತಿರುವುನ್ನು ಗಮನಿಸಿದ್ದಾರೆ. ನಂತರ ಕ್ಯಾಬಿನ್ ಸಿಬ್ಬಂದಿ ಅಗ್ನಿಶಾಮಕ ಸಾಧನವನ್ನು ಬಳಸಿ ಬೆಂಕಿಯನ್ನು ನಂದಿಸಿದ್ದಾರೆ.

ಬಳಿಕ ಗುರುವಾರ ಮಧ್ಯಾಹ್ನ 12.45ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಸದ್ಯ ಅದೃಷ್ಟವಶಾತ್ ಘಟನೆ ವೇಳೆ ಯಾವುದೇ ಯಾವುದೇ ಪ್ರಯಾಣಿಕರಿಗೆ ಅಥವಾ ಕ್ಯಾಬಿನ್ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ.

ಇದೇ ವಿಚಾರವಾಗಿ ಇಂಡಿಗೋ, ದಿಬ್ರುಗಢ್‍ನಿಂದ ದೆಹಲಿಗೆ 6ಇ 2037 ವಿಮಾನದಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್ ಬ್ಯಾಟರಿ ಬಿಸಿಯಾದ ಘಟನೆ ಸಂಭವಿಸಿದೆ. ಎಲ್ಲಾ ಅಪಾಯಕಾರಿ ಘಟನೆಗಳನ್ನು ನಿರ್ವಹಿಸಲು ಸಿಬ್ಬಂದಿಗೆ ತರಬೇತಿ ನೀಡಿದ್ದರಿಂದ, ಅವರು ಪರಿಸ್ಥಿತಿಯನ್ನು ತ್ವರಿತವಾಗಿ ನಿರ್ವಹಿಸಿದ್ದಾರೆ ಮತ್ತು ವಿಮಾನದಲ್ಲಿರುವ ಯಾವುದೇ ಪ್ರಯಾಣಿಕರಿಗೆ ಅಥವಾ ಆಸ್ತಿಗೆ ಹಾನಿಯಾಗಿಲ್ಲ ಎಂದು ತಿಳಿಸಿದೆ.

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?