ಶಿವಮೊಗ್ಗ,ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲೋಕಾರ್ಪಣೆ,ಡಿಸೆಂಬರ್
ಮಾಜಿ ಮುಖ್ಯಮಂತ್ರಿ .ಬಿ .ಎಸ್. ಯಡಿಯೂರಪ್ಪನವರಿಂದ ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ವೀಕ್ಷಣೆ ........
ಶಿವಮೊಗ್ಗ :---ನಿನ್ನೆ ಸಂಜೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ .ಬಿ .ಎಸ್ ಯಡಿಯೂರಪ್ಪನವರು ತಮ್ಮ ಕನಸಿನ ಮಹತ್ವದ ಯೋಜನೆಯಾದ ಶಿವಮೊಗ್ಗ ಸೋಗಾನೆಯಲ್ಲಿ ವಿಶೇಷ ಆಸಕ್ತಿಯಿಂದ ನಡೆಯುತ್ತಿರುವ ವಿಮಾನ ನಿಲ್ದಾಣದ ಕಾಮಗಾರಿಯನ್ನು ವೀಕ್ಷಣೆ ಮಾಡಿದರು .ಯಡಿಯೂರಪ್ಪನವರ ಜತೆಯಲ್ಲಿ ವಿಮಾನ ನಿಲ್ದಾಣದ ಪ್ರಾಧಿಕಾರದ ಅಧಿಕಾರಿಗಳು ,ಇಂಜಿನಿಯರ್ ಗಳು ,ಲೋಕಸಭಾ ಸದಸ್ಯ
ಬಿ .ವೈ .ರಾಘವೇಂದ್ರ ಮುಂತಾದವರು ಹಾಗೂ ಕಾಮಗಾರಿಯ ಗುತ್ತಿಗೆದಾರರ ನ್ಯಾಷನಲ್ ಕನ್ ಸ್ಟ್ರಕ್ಷನ್ ಸಂಸ್ಥೆಯ ಇಬ್ರಾಹಿಂ ಶರೀಫ್ ರವರ ಮಗ ಅನೂಪ್ ಸಾಹಿಲ್ ಕಾಮಗಾರಿ ವೀಕ್ಷಣೆ ಸಮಯದಲ್ಲಿ ದ್ದರು .ಕಾಮಗಾರಿಯು ವ್ಯವಸ್ಥಿತವಾಗಿ ನಿರೀಕ್ಷೆಯ ಮಟ್ಟದಲ್ಲಿ ನಡೆಯುತ್ತಿದೆ ಇದೇ ವರ್ಷ ಡಿಸೆಂಬರ್ ನಲ್ಲಿ ಅಂತಿಮ ಗೊಂಡು ಲೋಕಾರ್ಪಣೆ ಮಾಡುವಂತೆ ಎಲ್ಲ ಸಿದ್ಧತೆ ನಡೆದಿದೆ .ರಾಜ್ಯದಲ್ಲಿ ಬೆಂಗಳೂರು ದೇವನಹಳ್ಳಿ ವಿಮಾನ ನಿಲ್ದಾಣ ಬಿಟ್ಟರೆ ಇದು ಎರಡನೆಯ ದೊಡ್ಡಅಂತಾರಾಷ್ಟ್ರೀಯ ಮಟ್ಟದ ವಿಮಾನಿಲ್ದಾಣವಾಗಲಿದೆ.
🖊️ವರದಿ:-ವೀರಮಣಿ


Comments
Post a Comment