ಪೊಲೀಸರು ಮೊಬೈಲ್ ಫೋನ್ ಕಿತ್ತುಕೊಂಡರೆ ಮಾಹಿತಿ ನೀಡಿ: ಕಮಲ್ ಪಂತ್,
ಬೆಂಗಳೂರು:-ಅನುಮತಿ ಇಲ್ಲದೆ ಯಾವ ಪೊಲೀಸ್ ಅಧಿಕಾರಿಯೂ ಮೊಬೈಲ್ ಪರಿಶೀಲನೆ ಮಾಡಬಾರದು. ಅಂಥ ಘಟನೆ ಕಂಡು ಬಂದರೆ ಗಮನಕ್ಕೆ ತನ್ನಿ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.
ಯಾವುದೇ ನೆಪದಲ್ಲಿ ಯಾರೊಬ್ಬರ ಮೊಬೈಲ್ ಫೋನ್ ಅನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಒಪ್ಪುವುದಿಲ್ಲ. ಅಂತಹ ಯಾವುದೇ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇಂತಹ ಘಟನೆಗಳನ್ನು ಕಂಡರೆ, ತಕ್ಷಣ ಘಟನೆ ಸ್ಥಳ ಹಾಗೂ ಹೊಯ್ಸಳ ವಾಹನದ ಸಂಖ್ಯೆಯ ವಿವರಗಳನ್ನು ಗಮನಕ್ಕೆ ತನ್ನಿ. ಅಂತಹ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ತಿಳಿಸಿದ್ದಾರೆ.
ಗಸ್ತು ಪೊಲೀಸರು ವಿನಾಕಾರಣ ಸಾರ್ವಜನಿಕರನ್ನು ತಡೆದು ಮೊಬೈಲ್ ಪರಿಶೀಲನೆ ನೆಪದಲ್ಲಿ ಮೊಬೈಲ್ ಫೋನ್ ಅನ್ನು ಪಡೆದು ವೈಯಕ್ತಿಕ ವಿಚಾರಗಳನನ್ನು ಕೇಳಿ ತೊಂದರೆ ನೀಡುತ್ತಿದ್ದಾರೆ ಎಂದು ಹಲವರು ಟ್ವಿಟರ್ ನಲ್ಲಿ ದೂರಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆಯುಕ್ತರು ಟ್ವಿಟರ್ ನಲ್ಲೇ ಸ್ಪಷ್ಟನೆ ನೀಡಿದ್ದಾರೆ.
.@BlrCityPolice doesn't approve of taking over the mobile phone of anyone under any pretext. We strongly disapprove of any such act. If you come across such an incident, immediately share/dm the below details:
(1/2)https://t.co/pF6NSNPi2L
— Kamal Pant, IPS. ಪೊಲೀಸ್ ಆಯುಕ್ತರು, ಬೆಂಗಳೂರು ನಗರ. (@CPBlr) April 2, 2022


Comments
Post a Comment