ಬೈಕ್ ಸಮೇತ ಕೆರೆಗೆ ಬಿದ್ದ (ಎನ್ ಆರ್ ಪುರ) ಕೈಮರದ ಯುವಕ,ಸ್ಥಳದಲ್ಲೇ ಕೊನೆಯುಸಿರು !



ನರಸಿಂಹರಾಜಪುರ:-

ನಿಯಂತ್ರಣ ತಪ್ಪಿದ ಬೈಕ್ ಸಮೇತ ಇಬ್ಬರು ಕೆರೆಗೆ,

 ಎನ್ ಆರ್ ಪುರ,(ಕೈಮರದ) ಮೂಲದ ಯುವಕನೊಬ್ಬ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.


ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದ ಕುಣಿಮಕ್ಕಿ ಗ್ರಾಮದ ಯುವಕ ಶಿವು (25) ಮೃತಪಟ್ಟ ದುರ್ದೈವಿ. ಶಿವು ನರಸಿಂಹರಾಜಪುರದ ಬಿ.ಎಚ್.ಕೈಮರದ ಬಾಳೆಹೊನ್ನೂರು ರಸ್ತೆಯಲ್ಲಿ ಗ್ಯಾರೇಜ್ ನಡೆಸುತ್ತಿದ್ದರು. ನಿನ್ನೆ ರಾತ್ರಿ ತಮ್ಮ ಗೆಳೆಯನೊಬ್ಬನ ಜೊತೆಗೆ ಸಿನೆಮಾ ವೀಕ್ಷಿಸಲು ಭದ್ರಾವತಿಯ ಚಿತ್ರಮಂದಿರಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ,


ಅಲ್ಲಿಂದ ವಾಪಸ್‌ ನರಸಿಂಹರಾಜಪುರ ಕಡೆಗೆ ಬರುತ್ತಿರುವಾಗ ರಾತ್ರಿ 1.30 ರ ಸಮಯದಲ್ಲಿ ಭದ್ರಾವತಿ-ಉಂಬಳೆಬೈಲು ನಡುವಿನ ರಸ್ತೆಯ ಬದಿಯಲ್ಲಿರುವ ಕೆರೆಗೆ ಬೈಕ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಅವರ ಕೂಗಾಟವನ್ನು ಕೇಳಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಓಡಿಬಂದು ಇಬ್ಬರನ್ನು ಮೇಲೆತ್ತಿದ್ದಾರೆ. ಆದರೆ ಆ ವೇಳೆಗೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಶಿವು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ ಅನ್ನು ಶಿವು ಅವರೇ ಓಡಿಸುತ್ತಿದ್ದರು ಎಂಬ ಪ್ರಥಮ ಮಾಹಿತಿ ಲಭ್ಯವಾಗಿದೆ. ಹಿಂಬದಿಯಲ್ಲಿ ಕುಳಿತಿದ್ದ ಮತ್ತೊಬ್ಬ ಯುವಕನೂ ಆಸ್ವಸ್ಥಗೊಂಡಿದ್ದು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲ ಸಮಯದ ಹಿಂದಷ್ಟೇ ನರಸೀಂಹರಾಜಪುರದಲ್ಲಿ ಗ್ಯಾರೇಜ್‌ ಆರಂಭಿಸಿದ್ದರು. ಶಿವು ಮೃತಪಟ್ಟ ಸುದ್ದಿ ತಿಳಿದು ಕುಟುಂಬಸ್ಥರು ಹಾಗೂ ಗೆಳೆಯರ ಆಕ್ರಂದನ ಮುಗಿಲು ಮಟ್ಟಿದೆ.


 ನರಸಿಂಹರಾಜಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.




🖊️ವರದಿ:-ಮಜೀದ್ ಕೊಪ್ಪ




Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?