ಕಾರ್ - ಬೈಕ್ ನಡುವೆ ಭೀಕರ ರಸ್ತೆ ಅಪಘಾತ:-ಶಶಿ ಶೇಕರ್, ಅರ್ಚಕ ಸ್ಥಳದಲ್ಲೇ ಸಾವು,!
ಶೃಂಗೇರಿ:- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಮ್ಮಾರು ಮಾಣಿಬೈಲು ರಸ್ತೆಯಲ್ಲಿ ಶನಿವಾರ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ . ಶೃಂಗೇರಿ ಕಡೆಯಿಂದ ನೆಮ್ಮಾರಿನತ್ತ ಸಾಗುತ್ತಿದ್ದ ಬೈಕ್‌ಗೆ ಮಂಗಳೂರು ಕಡೆಯಿಂದ ಶೃಂಗೇರಿಗೆ ಬರುತ್ತಿದ್ದ ಕಾರು ಮುಖಾಮುಖಿಯಾಗಿದೆ . ಡಿಕ್ಕಿ ಭೀಕರತೆಗೆ ಕಾರಿನಡಿ ಸಿಲುಕಿದ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ . ಹರಿಹರಪುರ ಮಠದಲ್ಲಿ ಕುಂಭಾಭಿಷೇಕ ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಬೆಂಗಳೂರು ಮೂಲದ ಅರ್ಚಕ ಶಶಿಶೇಖರ್ ( 57 ) ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ . ಈ ಮಾರ್ಗದಲ್ಲಿ ಮರದ ರೆಂಬೆ ಕೊಂಬೆಗಳು ರಸ್ತೆಗೆ ಚಾಚಿಕೊಂಡಿದ್ದು , ಇವುಗಳಿಂದ ತಪ್ಪಿಸಿಕೊಳ್ಳಲು ಅರ್ಚಕ ಬೈಕ್ ಅನ್ನು ಕೊಂಚ ರಸ್ತೆ ನಡುವೆ ತಂದಾಗ ಕ್ಷಣಾರ್ಧದಲ್ಲಿ ಅವಘಡ ಸಂಭವಿಸಿದೆ, ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ನೂರಾರು ಸ್ಥಳೀಯರು ಜಮಾಯಿಸಿ ಅರಣ್ಯ ಇಲಾಖೆಯ
ರಸ್ತೆಯ ಮೇಲೆಯೇ ಚಾಚಿರುವ ಮರ , ಗಿಡ , ಪೊದೆ ಗಳನ್ನು ತೆರವುಗೊಳಿಸದ ಬೇಜವಾಬ್ದಾರಿ ಅಧಿಕಾರಿಗಳು ಅಮಾಯಕರ ಜೀವ ತೆಗೆಯುತ್ತಿದ್ದಾರೆ ಎಂದು ಕಿಡಿಕಾರಿದರು .
ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು . ಶಾಸಕ ಟಿ.ಡಿ.ರಾಜೇಗೌಡ ಅವರು ಉನ್ನತ ಅಧಿಕಾರಿಗಳಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು . ಈ ಘಟನೆಗೆ ಇಲಾಖೆಯೇ ನೇರಹೊಣೆ . ಮೃತಪಟ್ಟ ಅರ್ಚಕರ ಕುಟುಂಬಕ್ಕೆ ಅರಣ್ಯ ಇಲಾಖೆಯವರೇ ಪರಿಹಾರ ನೀಡಬೇಕು . ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧವೇ ಕ್ರಿಮಿನಲ್ ಪ್ರಕರಣ ದಾಖಲಾಗಬೇಕು . ಈ ಘಟನೆಗೆ ಅಧಿಕಾರಿಗಳೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು . ಆನಂತರ ಜೆಸಿಬಿ ಮೂಲಕ ಸಂಚಾರಕ್ಕೆ ಅಡ್ಡಿಯಾಗಿದ್ದ ಮರ ಗಿಡ ಬಳ್ಳಿಗಳನ್ನು ತೆರವುಗೊಳಿಸಲಾಯಿತು . ಆ ನಂತರ ರಸ್ತೆ ಸಂಚಾರ ಮತ್ತೆ ಆರಂಭಿಸಲಾಯಿತು .
🖊️ ಮಜೀದ್,ಕೊಪ್ಪ


Comments
Post a Comment