ಅಂದು ಹೋರಾಟಗಾರ,ಇಂದು ಆರೋಪಿ,? ಕಂಬಿಗಳ ಹಿಂದೆ ಆಸಿಫ್ ಆಪತ್ಬಾಂಧವ,
ಕರಾವಳಿಯಲ್ಲಿ ಒಂದು ಕಾಲದಲ್ಲಿ ಹೊತ್ತಿ ಉರಿದಿತ್ತು ಆಸಿಫ್ ರವರ ಸಮಾಜ ಸೇವೆಯನ್ನು ಕೊಂಡಾಡುವ ಲೇಖನಗಳು, ಸನ್ಮಾನಗಳು, ಬಾಷಣಗಳು, ಹೇಳಿಕೆಗಳು ಮತ್ತು ವರದಿಗಳು. ಮಹಲ್ಲ್ ಮಟ್ಟದಿಂದ ಹಿಡಿದು ತಾಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ಹೆಸರು ಹಾಗೂ ಸನ್ಮಾನವನ್ನು ಪಡದು ಮನೆ ಮನೆಯಲ್ಲೂ ಕೊಂಡಾಡುವಂತಹಾ ಕಾರ್ಯವೈಖರಿಯಲ್ಲಿ ತೊಡಗಿದ್ದ ಸಮಾಜ ಸೇವಕ ಇಂದು ಕಂಬಿಗಳ ಹಿಂದೆ ಬಂದಿಯಾಗಿದ್ದಾರೆ..
ಕೆಲ ಆಸ್ಪತ್ರೆಗಳ ದಂಧೆಗಳನ್ನು ಬಯೆಲಿಗೆ ತಂದಿದ್ದರು.. ಬಡವರು ನಿದ್ರೆಗೆಟ್ಟು ನೂರಾರು ಮೈಲಿಗಳಿಂದ ಮಂಗಳೂರಿನ ಆಸ್ಪತ್ರೆಗೆ ಬಂದು ತಮ್ಮ ಕುಟುಂಬದ ರೋಗಿಗಳನ್ನು ದಾಖಲು ಮಾಡುವಾಗ ನಿರಾಕರಿಸುವ ಸಿಬ್ಬಂದಿಗಳ ದೂರನ್ನು ಆಸಿಪ್ ರವರ ಗಮನಕ್ಕೆ ತಂದರೆ ರಾತ್ರೋರಾತ್ರಿಯಲ್ಲೇ ಅಲ್ಲಿಗೆ ಬಂದು ಅವರನ್ನು ತರಾಟೆಗೆ ತೆಗೆದು ಪ್ರತಿಭಟಿಸಿ ರೋಗಿಗಳಿಗೆ ದ್ವನಿಯಾಗಿದ್ದರು. 1500 ಕ್ಕೂ ಹೆಚ್ಚು ಅನಾಥ, ಕೊಳೆತ, ಅಪಘಾತದಲ್ಲಿ ಚೆಲ್ಲಾಪಿಲ್ಲಿಯಾದ, ಶವಗಳನ್ನು ಅಂತ್ಯ ಸಂಸ್ಕಾರ ಮಾಡಿ ಸಾಧನೆ ಮೆರೆದ ವ್ಯಕ್ತಿ ಆಸಿಪ್..
ಕಳೆದ ಕೊರೋನ ಸಂದರ್ಭದಲ್ಲಿ ನೂರಾರು ಕೋವಿಡ್ ಪೀಡಿತ ಸತ್ತ ರೋಗಿಗಳ ಶವಗಳನ್ನು ಆರೈಕೆ ಮಾಡಿ ಸಮಾಜದಲ್ಲಿ ಸಮಾಜ ಸೇವಕನಾಗಿ ಗುರುತಿಸಿಕೊಂಡವರು ಆಸಿಪ್.. ರೋಗ ಪೀಡಿತ ಅಸಹಾಯಕ ರೋಗಿಗಳಿಗೆ ಚಿಕಿತ್ಸೆಗಾಗಿ ಲಕ್ಷ ಲಕ್ಷ ರುಪಾಯಿ ಜನರಿಂದ ಸಂಗ್ರಹಿಸಿ ಕೊಟ್ಟು ಮಾನವೀಯತೆ ಮೆರೆದಿದ್ದರು. ಈ ಸೇವೆ ಸಮಾಜದಲ್ಲಿ ಸುಲಭವಾಗಿ ಮುಂದೂಡುತ್ತಿತ್ತು ಏಕೆಂದರೆ ಅಲ್ಲಿ ರಾಷ್ಟ್ರೀಯ ಲಾಭವನ್ನಾಗಿರಲಿಲ್ಲ ಆಸಿಫ್ ರವರು ಬಯಸಿದ್ದು.
ಎಂದು ಆ ಸುರತ್ಕಲ್ ಅಕ್ರಮ ಟೋಲ್ ವಿರುದ್ದ ಆಸಿಫ್ ಪ್ರತಿಭಟನೆಗೆ ಇಳಿಯುತ್ತಾರೋ ಅಂದು ಮಂಗಳ ಮುಖಿಯರ ದಾಳಿಯಿಂದ ಆಶ್ರಮದಲ್ಲಿ ಕೆಲಸದಾಖೆಗೆ ಹಲ್ಲೆ ಮಾಡುವ ವರೆಗೂ ಟೋಲ್ ವಿರುದ್ದದ ದ್ವನಿಯನ್ನು ಪ್ರಶ್ನಿಸಿದ ನಂತರ ಇವರ ಸೇವೆಯ ಸುಲಭದ ದಾರಿ ಮುಳ್ಳಾಗಿತ್ತು.. ಇಲ್ಲೇನೋ ಸಂಶಯ ಮೂಡುವುದಿಲ್ಲವೇ...?
ಸತ್ಯ ಹೇಳುವುದಾದರೆ ಆಸಿಫ್ ರವರ ಮೇಲೆ ಕೆಲವು ಆರೋಪಗಳಿದ್ದು ಈಗ ಅವರು ಆರೋಪಿಯಾಗಿದ್ದಾರೆ. ಆದರೆ ಅದರ ಸತ್ಯಾಸತ್ಯತೆಗಳನ್ನು ಅಳೆದು ಹೇಳುವುದು ಸರಿಯಲ್ಲದಿದ್ದರೂ ನನ್ನಲ್ಲಿ ಕಾಡಿದ ವಿಮರ್ಶೆ ನಿಮ್ಮಲ್ಲಿಡುವುದು ನನ್ನ ಬಾಧ್ಯತೆ..
ಜನರಲ್ಲಿ ಆಸಿಪ್ ರವರ ಮೇಲಿನ ಅಭಿಮಾನ ಇಲ್ಲವಾಗುತ್ತಿದೆ ಎಂದು ಕೆಲವರು ಹೇಳುತ್ತಾರೆ. ಅದಕ್ಕೆ ಕಾರಣ ಏನು ಎಂಬುದು ನನಗೆ ಗೊತ್ತಿಲ್ಲ. ಆದರೆ ಒಬ್ಬ ವ್ಯಕ್ತಿಯ ಮೇಲೆ ಆದ ಗಾಯವೆಂದು ಪರಿಗಣಿಸದೇ ಸಮಾಜ ಸೇವೆ ಮಾಡಿ ಹತ್ತಾರು ಮಾನಸಿಕ ಅಸ್ವಸ್ಥತರಿಗೆ ಊಟ, ವಸತಿ, ಔಷಧಿ ಕೊಟ್ಟು ಸಲಹುತ್ತಿರುವ ಒಂದು ಶಕ್ತಿ ಬಂಧನದಲ್ಲಿದ್ದರೆ ನಾಳೆ ಈ ಹೊಟ್ಟೆಗಳಿಗೆ ಅನ್ನಕೊಡುವವರಾರು ಎಂಬುದೇ ನನ್ನ ವಿಮರ್ಷೆ..
ಆಸಿಫ್ ರವರ ಪರವಾಗಿ ಇಂದು ಲೇಖನಗಳು, ವರದಿಗಳು, ಸನ್ಮಾನಗಳು ಚಲಿಸದಿರಲು ಕಾರಣ ಆ ವ್ಯಕ್ತಿ ಕಾನೂನಿನಡಿಯಲ್ಲಿ ಅರೋಪಿ ಎಂಬುದಾಗಿರಬಹುದು. ಅದರ ಸತ್ಯಾಸತ್ಯತೆ ಏನೆಂಬುದು ನಂತರದ ಮಾತಾಗಿರಲಿ ಮತ್ತು ಸದ್ಯಕ್ಕೆ ಈ ಸಮಾಜಕ್ಕೆ ಆಸಿಫ್ ರವರ ಅಗತ್ಯವಿದೆ. ಹತ್ತಾರು ಹಸಿದ ಹೊಟ್ಟೆಗಳು ಕಾಯುತ್ತಿದೆ ಎಂಬುದನ್ನು ಮನವರಿತು ಬಿಡುಗಡೆಗಾಗಿ ಈ ಸಮಾಜದ ಗಣ್ಯರು ಮುಂದೆ ನಿಲ್ಲಲಿ ಎಂಬುದೇ ನನ್ನ ಮನದ ಅಭಿಲಾಷೆ.
✍️ ಹರ್ಷದ್ ಕೊಪ್ಪ



Comments
Post a Comment