ಕೊಪ್ಪ, ಸಣ್ಣಕೇರೆಯ ಮಸೀದಿ ಕಾರ್ಯಕ್ರಮದಲ್ಲಿ,ರಾಜ್ಯ ಪ್ರಶಸ್ತಿ ಪಡೆದ ಶಾಲಾ ಮಕ್ಕಳಿಗೆ ಸನ್ಮಾನ,
ವರದಿ:-ಮಜೀದ್ ಕೊಪ್ಪ
ಕೊಪ್ಪ;- ಹಂಝತುಲ್ ಖಾರ್ರರ್ ಜುಮ್ಮಾ ಮಸೀದಿ ಸಣ್ಣಕೇರೆ ಕೊಪ್ಪ,ಇದರ ಸ್ವಲಾತ್ ವಾರ್ಷಿಕೋತ್ಸವ ಮತ್ತು ಸೌಹಾರ್ದ ಸಮಾವೇಶ ಹಾಗೂ ಬುರ್ದಾ ಮಜ್ಲಿಸ್ ಎರಡು ದಿನದ ಕಾರ್ಯಕ್ರಮವು,ಯಾವುದೇ ಭೇದಭಾವವಿಲ್ಲದೆ ಎಲ್ಲಾ ಧರ್ಮದವರು ಸೇರಿ ತುಂಬಾ ಅತ್ಯುತ್ತಮವಾಗಿ ನೆರವೇರಿಸಿದರು, ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ, ಜನಾಬ್, ಆಫೀಝ್ ಸುಫಿಯಾನ್ ಸಖಾಫಿ ಎಸ್. ಎಸ್. ಎಫ್. ರಾಜ್ಯ ಕೋಶಾಧಿಕಾರಿ, ಹಾಗೂ ಸನ್ಮಾನ್ಯ ಟಿ. ಡಿ. ರಾಜೇಗೌಡರು ಶಾಸಕರು. ಶೃಂಗೇರಿ ವಿಧಾನಸಭಾ ಕ್ಷೇತ್ರ. ಶ್ರೀ ಸುಧೀರ್ ಕುಮಾರ್ ಮುರೊಳ್ಳಿ.
ನ್ಯಾಯವಾದಿಗಳು, ಕೊಪ್ಪ ಶ್ರೀ ಮೆಲ್ವಿನ್ ಟೆಲ್ಲಿಸ್, ನಿತ್ಯ ದಾರ ಮಾತೆ ದೇವಾಲಯ ಕೊಪ್ಪ. ಇಬ್ರಾಹಿಂ ಮದನಿ ಖತೀಬರು ಜೋಗಿಸರ. ಇಸ್ಮಾಯಿಲ್ ಇಸ್ಮಾಯಿಲ್. ಸಆದಿ. ಖತೀಬರು ಸಣ್ಣಕೆರೆ. ಮುನೀರ್ ಅಧ್ಯಕ್ಷರು ಜುಮ್ಮಾ ಮಸೀದಿ ಸಣ್ಣಕೆರೆ. ಶ್ರೀ ಹೆಚ್ ಎಂ. ಹಸನಬ್ಬ ಗೌರವ ಅಧ್ಯಕ್ಷರು ಜುಮ್ಮಾ ಮಸೀದಿ ಸಣ್ಣ ಕೆರೆ. ಶ್ರೀನಿವಾಸ್ ಹರಂದೂರ್ ಗ್ರಾಮ ಪಂಚಾಯಿತಿ ಸದಸ್ಯರು, ಇತರ ಗಣ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದ ಸಮಯದಲ್ಲಿ.ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಣ್ಣಕೆರೆ. ಪ್ರಥಮ ದ್ವಿತೀಯ ತೃತೀಯ ರಾಜ್ಯಪ್ರಶಸ್ತಿ ವಿಜೇತರಾದ ಮಕ್ಕಳನ್ನು ಪ್ರೋತ್ಸಾಹಿಸಿ ಸನ್ಮಾನಿಸಲಾಯಿತು.



All the best good news
ReplyDelete