ಕೊಪ್ಪ, ಕಾಡು ಬಿಟ್ಟು ನಾಡಿಗೆ ಬಂದ ಕಾಳಿಂಗ,


 ಕೊಪ್ಪ:- ಮನೆಯೊಂದರಲ್ಲಿ ಅವಿತುಕೊಂಡು ಮನೆಯವರು ಕಂಗಾಲಾಗುವಂತೆ ಮಾಡಿದ ಘಟನೆ ಸೋಮವಾರ ಮೇಲಿನ ಪೇಟೆಯಲ್ಲಿ ನಡೆದಿದೆ.

ಜಾಹೀರಾತು:-



ಕೊಪ್ಪದ ಮೇಲಿನಪೇಟೆ ಸಮೀಪದ ಟೋಲ್ ಗೇಟ್ ನಿವಾಸಿ ನಾಗರಾಜ  ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಇದ್ದಕ್ಕಿದ್ದಂತೆ ಮನೆಯೊಳಗೆ  ನುಗ್ಗಿದ ಬೃಹತ್ ಗಾತ್ರದ ಕಾಳಿಂಗ ಸರ್ಪ ನೋಡಿ  ಮನೆಯವರು ಗಾಬರಿಯ ಗೊಂಡಿದ್ದರು,


 ಮನೆಯ ಮೂಲೆಯಲ್ಲಿ ಸುಮಾರು 12 ಅಡಿ ಉದ್ದ ಕಾಳಿಂಗ ಸರ್ಪ ಇತ್ತು, ಆತಂಕಗೊಂಡ ಮನೆಯವರು ಕೊಪ್ಪದ ಉರಗ ತಜ್ಞ ಹರೀಶ್ ಅವರಿಗೆ ಮಾಹಿತಿ ನೀಡಿದರು.


ಕೂಡಲೇ ಸ್ಥಳಕ್ಕೆ ಧಾವಿಸಿದ ಹರೀಶ್ ಕಾರ್ಯಾಚರಣೆ ನಡೆಸಿ, ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆಹಿಡಿದು  ಮರಳಿ ಕಾಡಿಗೆ ಬಿಟ್ಟರು. ಕಾಳಿಂಗ ಸರ್ಪ ಮನೆಯಿಂದ ತೆರವುಗೊಳ್ಳುತ್ತಿದ್ದಂತೆ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.


ಇತ್ತೀಚೆಗೆ ಮಲೆನಾಡು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಳಿಂಗ ಸರ್ಪಗಳು ಕಾಣಿಸಿಕೊಳ್ಳುತ್ತಿದ್ದು, ಇವುಗಳನ್ನು ಸೆರೆ ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಗಳಲ್ಲಿ ಬಿಡಲಾಗುತ್ತಿದೆ.


 ಕಾಳಿಂಗ ಸರ್ಪ ಬೇರೆಲ್ಲ ಹಾವುಗಳಿಗಿಂತಲೂ ಉದ್ದವಾದ ಹಾವು. ಈ ಕಾಳಿಂಗ ಸರ್ಪ ಕಚ್ಚಿದರೆ ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆ. ಕಾಳಿಂಗ ಸರ್ಪ ಸುಮಾರು 10ರಿಂದ 15 ಅಡಿ ಉದ್ದವಿರುತ್ತದೆ ಮತ್ತು ಸರಾಸರಿ 20 ಪೌಂಡ್​ನಷ್ಟು ತೂಕವಿರುತ್ತದೆ. ಕಾಳಿಂಗ ಸರ್ಪಗಳು ಸಾಮಾನ್ಯವಾಗಿ ಸಣ್ಣ ಪ್ರಾಣಿಗಳು ಅಥವಾ ಇತರ ಹಾವುಗಳನ್ನು ತಿನ್ನುತ್ತವೆ. 





ವರದಿ,🖋ಮಜೀದ್ ಕೊಪ್ಪ








Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?