ಮಹಿಳಾ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಮೂವರು ಆಯ್ಕೆ,
ಚಿಕ್ಕಮಗಳೂರು : ರಾಜ್ಯದಲ್ಲೇ ಪ್ರಪ್ರ ಥಮ ಬಾರಿಗೆ ಮಹಿಳಾ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬಂದಿದ್ದು , ಅಜ್ಜಂಪುರ ಘಟಕದ ತಾಲೂಕು ಅಧ್ಯಕ್ಷರಾಗಿ ಮುಗುಳಿ ಲಕ್ಷ್ಮೀದೇವಮ್ಮ , ನರಸಿಂಹರಾಜಪುರ ತಾಲೂಕು ಅಧ್ಯಕ್ಷರಾಗಿ ಭಾಗ್ಯ ನಂಜುಂಡಸ್ವಾಮಿ ಹಾಗೂ ಕೊಪ್ಪ ತಾಲೂಕು ಅಧ್ಯಕ್ಷರಾಗಿ ಮೈತ್ರಾ ಗಣೇಶ್ ಆಯ್ಕೆಯಾಗಿದ್ದಾರೆ . ಹೆಣ್ಣು ಸ್ತ್ರೀ ಕುಲದ ಶಕ್ತಿ , ಮಹಿಳಾ ಕಸಾಪ ಘಟಕಗಳನ್ನು ಮುನ್ನಲೆಗೆ ತರುವುದರೊಂದಿಗೆ ಕನ್ನಡ ನಾಡು , ನುಡಿ , ನೆಲ ಮತ್ತು ಜಲಕ್ಕೆ ಸಂಬಂಧಿಸಿದಂತೆ ಎಲ್ಲರೂ ಸೇರಿ ಕೈ ಜೋಡಿಸಿ ಕನ್ನಡದ ರಥವನ್ನು ಎಳೆಯೋಣವೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.


Comments
Post a Comment