ಅಮ್ಮ ಫೌಂಡೇಶನ್ ವತಿಯಿಂದ,ಉದ್ಯೋಗ ಮೇಳ, ಸಂದರ್ಶನಕ್ಕೆ ಹಾಜರಾಗುವವರಿಗೆ ತರಬೇತಿ,


 

ಕೊಪ್ಪ:-ಅಮ್ಮ ಫೌಂಡೇಶನ್ ವತಿಯಿಂದ ಮೇ 8 ರಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ . ಈ ಹಿನ್ನೆಲೆಯಲ್ಲಿ ಆಸಕ್ತ ಉದ್ಯೋಗಾಕಾಂಕ್ಷಿಗಳಿಗೆ ಸಂದರ್ಶನದಲ್ಲಿ ಹೇಗೆ ಭಾಗವಹಿಸಬೇಕು ಎಂಬ ಬಗ್ಗೆ ಶನಿವಾರ ( ಏ .30 ) ರಂದು ತರಬೇತಿ ನೀಡುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ . ಅಮ್ಮ ಫೌಂಡೇಶನ್ ಅಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ . ಲರ್ನಿಂಗ್ ಆ್ಯಂಡ್ ಡೆವಲಪ್ಟೆಂಟ್ ಎಚ್ ಆರ್‌ಡಿ ಬಿಪಿಎಂ ಇನ್ಫೋಸಿಸ್ ಸಂಸ್ಥೆಯ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಇಂದು ರಾವ್ ಅವರು ಉದ್ಯೋಗ ಹುಡುಕುತ್ತಿರುವ ಯುವಕ ಯುವತಿಯರಿಗೆ ಅನುಕೂಲವಾಗುವಂತೆ ತರಬೇತಿ ನೀಡಲಿದ್ದಾರೆ . ಕಂಪನಿಗಳಲ್ಲಿ ಸಂದರ್ಶನದಲ್ಲಿ ಭಾಗವಹಿಸುವ ಬಗ್ಗೆ , ಇಂಟರ್ವ್ಯೂ ಸ್ಕಿಲ್ಸ್ , ಉದ್ಯೋಗವಕಾಶವಿರುವ ಸೆಕ್ಟರ್ , ವ್ಯಕ್ತಿತ್ವ ವಿಕಸನದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ .



ಕಾರ್ಯಕ್ರಮ ಎಲ್ಲಿ , ಎಷ್ಟು ಗಂಟೆಗೆ ? ದಿನಾಂಕ 30-04-2022 ರ ಶನಿವಾರ ಶೃಂಗೇರಿ ನಗರದಲ್ಲಿ ಬೆಳಿಗ್ಗೆ 10.00 ರಿಂದ 11.30 ರ ವರೆಗೆ , ಕೊಪ್ಪದಲ್ಲಿ ಮಧ್ಯಾಹ್ನ 12.30 ರಿಂದ 2 ರ ವರೆಗೆ ಹಾಗೂ ಎನ್.ಆರ್ .ಪುರದಲ್ಲಿ ಸಂಜೆ 4.00 ರಿಂದ 5.30 ರ ವರಗೆ ನಡೆಯಲಿದೆ . ಎಸ್ಎಸ್ಎಲ್ ಸಿ , ಪಿಯುಸಿ , ಐಐಟಿ , ಡಿಪ್ಲೋಮಾ , ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿರುವ ಶೃಂಗೇರಿ , ಕೊಪ್ಪ ಬಾಳೆಹೊನ್ನೂರು , ಎನ್ . ಆರ್ .ಪುರ ಹಾಗೂ ಇತರ ಭಾಗದ ಅಭ್ಯರ್ಥಿಗಳು ಇದರಲ್ಲಿ ಭಾಗವಹಿಸಬಹುದು . ಭಾಗವಹಿಸಲು ಅಭ್ಯರ್ಥಿಗಳು ಗೂಗಲ್ ಫಾರ್ಮ್ ಲಿಂಕ್ ನಲ್ಲಿ ರಿಜಿಸ್ಟರ್ ಆಗಬಹುದು

 https://forms.gle/PvypXpJerzDzsrfE9


 ಹೆಚ್ಚಿನ ಮಾಹಿತಿಗಾಗಿ 8095679666 / 8088604934 / 9448922001 ಸಂಪರ್ಕಿಸಿ .




🖊️ವರದಿ:-ಮಜೀದ್ ಕೊಪ್ಪ





Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?