ಎನ್, ಆರ್, ಪುರ ಹಲ್ಲೆಗೈದು ಯುವಕನ ಬರ್ಬರ ಹತ್ಯೆ,!


 

ಎನ್ ಆರ್ ಪುರ:- ತಾಲ್ಲೂಕಿನ ಬಡಗಬೈಲ್ ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಇಬ್ಬರು ಯುವಕರ ಮಧ್ಯೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯಗೊಂಡ ಭೀಕರ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.


ಬಡಗಬೈಲು ಗ್ರಾಮದ ಅಳಲಗೆರೆ ಶಿರೀಶ್ (28) ಎಂಬಾತ ಕೊಲೆಯಾದ ಯುವಕ. ಗುರುವಾರ ರಾತ್ರಿ ಮೆಣಸೂರು ಬಾಬು ಎಂಬಾತನ ಮನೆ ಸಮೀಪದಲ್ಲಿ ಶಿರೀಶ್ ಹಾಗೂ ಬಾಬು ನಡುವೆ ಹಣಕಾಸು ವಿಚಾರದಲ್ಲಿ ಜಗಳ ಏರ್ಪಟ್ಟಿದೆ. ಜಗಳ ವಿಕೋಪಕ್ಕೆ ತಿರುಗಿ ಬಾಬು ಕತ್ತಿಯಿಂದ ಶಿರೀಶ್ ತಲೆಗೆ ಹೊಡೆದಿದ್ದಾನೆ. 




ಗಂಭೀರವಾಗಿ ಗಾಯಗೊಂಡ ಶಿರೀಶ್ ಅವರನ್ನು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ  ಶಿರೀಶ್ ಮೃತಪಟ್ಟಿದ್ದಾರೆ.


ಶಿರೀಶ್ ಅವಿವಾಹಿತನಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದ. ನರಸಿಂಹರಾಜಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಬಾಬುನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.




ವರದಿ:-🖊️ಮಜೀದ್ ಕೊಪ್ಪ





Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?