ಕರಿಯರು ಬಿಳಿಯರೆಂಬ ವರ್ಣಭೇದಗಳ ನಿರ್ಮೂಲನೆಗೆ ನಾಂದಿ ಹಾಡಿದ ಪ್ರವಾದಿ (ಸ.ಅ.), ಮುನೀರ್ ಅಹ್ಮದ್ ಸಿದ್ದೀಖಿ.
ಕೊಪ್ಪಳ: ಹದಿನಾಲ್ಕು ನೂರು ವರ್ಷಗಳ ಹಿಂದೆಯೇ ಕರಿಯರು ಬಿಳಿಯರು ಎಂಬ ಭೇದಭಾವ ಮಾಡುವ ಕಾಲವಾಗಿತ್ತು. ಆಗ ಪ್ರವಾದಿ ಮೊಹಮ್ಮದ್ (ಸ.ಅ.) ರವರು ಕರಿಯರಾಗಿದ್ದ ಹಫ್ಷಿ ಜನಾಂಗದ ಹಝ್ರತ್ ಬಿಲಾಲ್ (ರ. ಅ.) ಅವರನ್ನು ಪವಿತ್ರ ಸ್ಥಳವಾದ ಕಾಬಾದ ಮೇಲೆ ನಿಂತು ಆಝಾನ್ ಕರೆ ನೀಡಲು ಹೇಳಿ ಕಾಬಾದ ಮೇಲೆ ಹತ್ತಲು ಸ್ವತಃ ತಮ್ಮ ಭುಜದ ಸಹಾಯ ನೀಡುವ ಮೂಲಕ ಕರಿಯರ ಬಿಳಿಯರ ಮಧ್ಯದಲ್ಲಿದ್ದ ವರ್ಣಭೇದ ನಿರ್ಮೂಲನೆಗೆ ನಾಂದಿಹಾಡಿ ಕೆಳ ಮತ್ತು ಮೇಲ್ಜಾತಿ ಎಂಬ ಭೇದವಿಲ್ಲದೆ ಎಲ್ಲರೂ ಸಮಾನರೆಂಬ ಸಂದೇಶವನ್ನು ನೀಡಿದ್ದಾರೆ ಎಂದು ಮೌಲಾನಾ ಅಬುಲ್ ಕಲಾಂ ಆಝಾದ್ ಮಾದರಿ ಆಂಗ್ಲ ಮಾಧ್ಯಮ ಶಾಲಾ ಪಾಲಕರ ಹೋರಾಟ ಸಮಿತಿ ಅಧ್ಯಕ್ಷ ಮುನೀರ್ ಅಹ್ಮದ್ ಸಿದ್ದೀಖಿ ಹೇಳಿದರು.
ಕೊಪ್ಪಳ ನಗರದ ಯುಸೂಫಿಯಾ ಮಸೀದಿಯ ಸಭಾಂಗಣದಲ್ಲಿ ದಲಿತಪರ. ಜನಪರ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರಿಗೆ ಏರ್ಪಡಿಸಿದ್ದ ಸಹ ಭೋಜನ ಸ್ವೀಕರಿಸಿ ರಂಝಾನ್ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮುಂದುವರಿದು ಮಾತನಾಡಿ ರಂಝಾನ್ ತಿಂಗಳಲ್ಲಿ ವೃತವನ್ನು ಬೆಳಗಿನ ಜಾವ ಐದು ಗಂಟೆಯೊಳಗೆ ಸಹರಿ ಊಟ ಮುಗಿಸಿ ಸಂಜೆ ಆಝಾನ್ ಕರೆಯವರೆಗೂ ಅಲ್ಲಾಹನ ಭಕ್ತಿಯಿಂದ ಯಾವುದೇ ತಿಂಡಿ-ತಿನಿಸುಗಳು ಸೇವಿಸದೆ ಮತ್ತು ಒಂದು ಹನಿ ನೀರು ಸಹ ಕುಡಿಯದೇ. ಸುಳ್ಳು. ಮೋಸ. ವಂಚನೆಮಾಡದೆ. ಯಾರ ಮನಸ್ಸಿಗೂ ನೋಯಿಸದೆ. ಜಗಳವಾಡದೆ. ನಿತ್ಯ ಐದು ಬಾರಿ ನಮಾಝ್ ನಿರ್ವಹಿಸುತ್ತ ಎಲ್ಲ ಜನಾಂಗದ ಜನರೊಂದಿಗೆ ಸೌಜನ್ಯತೆಯಿಂದ ನಡೆದುಕೊಳ್ಳುವುದರಿಂದ ಪುಣ್ಯ ಲಭ್ಯವಾಗುತ್ತದೆ. ಇಂಥಾ ಪವಿತ್ರ ರಂಝಾನ್ ಸೌಹಾರ್ದ ಇಫ್ತಾರ್ ಕೂಟದಲ್ಲಿ ದಲಿತಪರ. ಜನಪರ ಸಂಘಟನೆಗಳ ನಾಯಕರು ಭಾಗವಹಿಸಿ ಐಕ್ಯತೆ ಮೂಡಿಸಿರುವುದು ಸಂತಸ ತಂದಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ)ಉಪ ಪ್ರಧಾನ ಸಂಚಾಲಕ ರಮೇಶ್ ಬೆಲ್ಲದ್. ಸಂಘಟನಾ ಸಂಚಾಲಕ ಸಿದ್ದರಾಮ ಹೊಸಮನಿ. ಮಾದಿಗ ದಂಡೋರ (ಮಾದಿಗ ಮೀಸಲಾತಿ ಹೋರಾಟ ಸಮಿತಿ) ಯ ಜಿಲ್ಲಾಧ್ಯಕ್ಷ ಕೆ.ಎಸ್. ಮೈಲಾರಪ್ಪ ಕವಲೂರ್ ವಕೀಲರು. ಪ್ರಥಮ ದರ್ಜೆ ಗುತ್ತಿಗೆದಾರ ಗವಿಸಿದ್ದಪ್ಪ ಬೆಲ್ಲದ್. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ರಮೇಶ ಪಿ. ಚಿಕೇನಕೊಪ್ಪ. ಪತ್ರಿಕಾ ಪ್ರತಿನಿಧಿ ಸಾಧಿಕ್ ಅಲಿ. ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್. ಎ. ಗಫಾರ್. ಯುವ ಮುಖಂಡ ಅಶ್ಫಾಖ್ ಸಿದ್ದೀಖಿ. ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಬ್ದುಲ್ ರಶೀದ್ ಸಿದ್ಧೀಖಿ ಮುಂತಾದವರು ಉಪಸ್ಥಿತರಿದ್ದರು.



Comments
Post a Comment