ಮೋದಿ ಕ್ಯಾಂಟೀನ್ ತೆರೆದ ಮಾಜಿ ಐಎಎಸ್ ಅಧಿಕಾರಿ, ಕೆ ಶಿವರಾಂ,
ಬೆಂಗಳೂರು; ಮಾಜಿ ಐಎಎಸ್ ಅಧಿಕಾರಿ ಕೆ.ಶಿವರಾಂ ಆನೇಕಲ್‌ನಲ್ಲಿ ಮೋದಿ ಕ್ಯಾಂಟೀನ್ ತೆರೆದು ಸುದ್ದಿಯಾಗಿದ್ದಾರೆ.
ಆನೇಕಲ್ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಬಿಜೆಪಿಯ ನಿವೃತ್ತ ಐಎಎಸ್ ಅಧಿಕಾರಿ ಶಿವರಾಂ ಆನೇಕಲ್ ನಲ್ಲಿ ಮೋದಿ ಕ್ಯಾಂಟೀನ್ ತೆರೆದಿದ್ದಾರೆ.
ತಾಲೂಕು ಕಚೇರಿಯ ಬಳಿಯಲ್ಲಿ ಮೋದಿ ಕ್ಯಾಂಟೀನ್ ತೆರೆದಿರುವ ಕೆ.ಶಿವರಾಂರವರು ಬಡ ಹಾಗೂ ಮಧ್ಯಮ ಕಾರ್ಮಿಕರು, ಜನಸಾಮಾನ್ಯರು, ಕೂಲಿ ಕಾರ್ಮಿಕರು, ಆಟೋ ಚಾಲಕರು, ರೈತರು,
ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ಮೋದಿ ಕ್ಯಾಂಟೀನ್ ನಲ್ಲಿ ಅತ್ಯಂತ ಕಡಿಮೆ ದರದಲ್ಲಿ ಊಟದ ವ್ಯವಸ್ಥೆಗೆ ಸಜ್ಜಾಗಿದ್ದಾರೆ.
ಬೆಳಗ್ಗೆ , ಮಧ್ಯಾಹ್ನ, ರಾತ್ರಿಯಲ್ಲೂ ಊಟದ ವ್ಯವಸ್ಥೆಯನ್ನು ಮಾಡಿದ್ದು ಬೆಳಗ್ಗೆ 10ರೂಪಾಯಿ, ಮಧ್ಯಾಹ್ನ ರಾತ್ರಿ15ರೂಪಾಯಿ, ಕಾಫಿ, ಟೀ 5ರೂಪಾಯಿ ಮೋದಿ ಕ್ಯಾಂಟೀನ್ ನಲ್ಲಿ ಸಿಗಲಿದೆ ಎಂದು ಬೋರ್ಡ್ ಹಾಕಲಾಗಿದೆ,

Comments
Post a Comment