ಜೋಡಿ ಮೃತ ದೇಹ ಪತ್ತೆ,ಕಾರಿನೊಳಗೆ ಬೆಂಕಿ ಹಚ್ಚಿಕೊಂಡ ಜೋಡಿ,



ಉಡುಪಿ: ಬೆಂಗಳೂರು ಮೂಲದ ಜೋಡಿಯೊಂದು ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಹೆಗ್ಗುಂಜೆಯ ಕೊತ್ತೂರಿನಲ್ಲಿ ಸಂಭವಿಸಿದೆ.



ಮೃತರನ್ನು ಯಶವಂತ್‌ ಯಾದವ್‌ (22) ಮತ್ತು ಜ್ಯೋತಿ (20) ಎಂದು ಗುರುತಿಸಲಾಗಿದ್ದು, ಇವರಿಬ್ಬರು ಮೂರು ದಿನಗಳ ಹಿಂದೆ ಹೆಬ್ಬಾಳದಿಂದ ನಾಪತ್ತೆಯಾಗಿದ್ದರು. ಇವರಿಬ್ಬರ ಮದುವೆಗೆ ಎರಡು ಕುಟುಂಬಗಳ ವಿರೋಧವಿದ್ದ ಹಿನ್ನೆಲೆ ಮನೆ ಬಿಟ್ಟು ಎರಡು ದಿನಗಳ ಹಿಂದೆ ಮದುವೆ ಮಾಡಿಕೊಂಡಿದ್ದರು ಎನ್ನಲಾಗಿದೆ.

ಮೃತ ಯಶವಂತ್ ಯಾದವ್ ಮತ್ತು ಜ್ಯೋತಿ ಭಾನುವಾರ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂದರ್ಭ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಕಂಡ ಸ್ಥಳೀಯರು ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ಆಗಿರಬೇಕೆಂದು ಸ್ಥಳಕ್ಕೆ ದೌಡಾಯಿಸಿದ್ದು, ಈ ಸಂದರ್ಭ ಕಾರೊಂದು ಹೊತ್ತಿ ಉರಿಯುತ್ತಿತ್ತು. ಇತ್ತ ಈ ಜೋಡಿಗಳು ಮೃತ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಿದ್ದಿದ್ದರು.


ಯಶವಂತ್ ಯಾದವ್ ಮತ್ತು ಜ್ಯೋತಿ ಜೋಡಿ ಬೆಂಗಳೂರಿನಿಂದ ಮಂಗಳೂರಿನವರೆಗೆ ಬೈಕ್‌ನಲ್ಲಿ ಬಂದಿದ್ದು, ಬೆಂಗಳೂರಿನಿಂದ ಹೊರಟಾಗಲೇ ಅಲ್ಲಿ ಕಾರು ಬಾಡಿಗೆಗೆ ನಿಗದಿ ಮಾಡಿದ್ದಾರೆ. ಮಂಗಳೂರಿನ ಅಲ್ಮಿಸ್ಬಾ ಕಾರ್ ರೆಂಟಲ್ ಸರ್ವಿಸ್‌ನಲ್ಲಿ ಕಾರನ್ನು ಬಾಡಿಗೆಗೆಂದು ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿ ಬೆಂಗಳೂರಿನಿಂದ ಮಂಗಳೂರಿಗೆ ಬೈಕಿನಲ್ಲಿ ಬಂದು ಕಾರ್ ರೆಂಟಲ್ ಸರ್ವಿಸ್‌ನ ಎದುರು ಬೈಕ್‌ನ್ನು ನಿಲ್ಲಿಸಿ ನಿನ್ನೆ ಬಾಡಿಗೆ ಕಾರನ್ನು ತೆಗೆದುಕೊಂಡು ಹೋಗಿದ್ದಾರೆ.


ಬಳಿಕ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






 

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?