ಅತ್ಯಾಚಾರ- ಕೊಲೆ ಆರೋಪಿಗಳ ಎನ್ ಕೌಂಟರ್ ನಕಲಿ,ಸುಪ್ರೀಂಕೋರ್ಟ್ ಸಮಿತಿ ಸ್ಪೋಟಕ ವರದಿ

 



ಹೈದ್ರಾಬಾದ್ ಪಶು ವೈದ್ಯೆಯ ಅತ್ಯಾಚಾರ- ಕೊಲೆ ಆರೋಪಿಗಳ ಎನ್ ಕೌಂಟರ್ ನಕಲಿ; ಸುಪ್ರೀಂಕೋರ್ಟ್ ಸಮಿತಿ ಸ್ಪೋಟಕ ವರದಿ




ಹೈದರಾಬಾದ್‌;2019ರಲ್ಲಿ ನಡೆದ ಪಶುವೈದ್ಯೆಯ‌‌ ಸಾಮೂಹಿಕ ಅತ್ಯಾಚಾರ- ಕೊಲೆ ಪ್ರಕರಣದ ಆರೋಪಿಗಳ ಎನ್‌ಕೌಂಟರ್ ʼನಕಲಿʼ ಎಂದು ಸುಪ್ರೀಂ ಕೋರ್ಟ್ ನೇಮಿಸಿದ ನ್ಯಾಯಮೂರ್ತಿ ಸಿರ್ಪುರ್ಕರ್ ಆಯೋಗ ಹೇಳಿದೆ.

ಆರೋಪಿಗಳಲ್ಲಿ ನಾಲ್ವರಲ್ಲಿ ಮೂವರು ಅಪ್ರಾಪ್ತ ವಯಸ್ಕರಾಗಿದ್ದರು. ಪ್ರಕರಣದ ತನಿಖೆಯಲ್ಲಿ ಎದ್ದುಕಾಣುವ ಲೋಪಗಳನ್ನು ಆಯೋಗವು ಎತ್ತಿ ತೋರಿಸಿದೆ ಮತ್ತು 10 ಪೊಲೀಸರನ್ನು ಕೊಲೆಗಾಗಿ ವಿಚಾರಣೆಗೆ ಒಳಪಡಿಸಲು ಶಿಫಾರಸು ಮಾಡಿದೆ.

ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರ ನೇತೃತ್ವದ ಮೂವರು ಸದಸ್ಯರ ಸಮಿತಿ ಈ ಕುರಿತು ಸುಪ್ರೀಂಕೋರ್ಟ್ ಗೆ ವರದಿ ನೀಡಿದೆ.

ಬಾಂಬೆ ಹೈಕೋರ್ಟ್ನ ಮಾಜಿ ನ್ಯಾಯಾಧೀಶೆ ರೇಖಾ ಸೊಂಡೂರ್ ಬಲ್ಡೋಟಾ ಮತ್ತು ಸಿಬಿಐನ ಮಾಜಿ ನಿರ್ದೇಶಕ ಡಿ.ಆರ್.ಕಾರ್ತಿಕೇಯನ್ ಆಯೋಗದ ಇತರ ಸದಸ್ಯರಾಗಿದ್ದಾರೆ.

ಪಶುವೈದ್ಯೆಯ ಅತ್ಯಾಚಾರ- ಕೊಲೆ ಆರೋಪಿಗಳ ಎನ್ ಕೌಂಟರನ್ನು ಕೆಲವರು ಸಂಭ್ರಮಿಸಿದ್ದರು. ಕೆಲವರು‌ ನ್ಯಾಯಾಲಯ ಶಿಕ್ಷೆ ವಿಧಿಸುವ ಮೊದಲು ಪೊಲೀಸರ ಎನ್ ಕೌಂಟರ್ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ನೈಜ ಆರೋಪಿಗಳ ರಕ್ಷಣೆಗೆ ಎನ್ ಕೌಂಟರ್ ನಡೆದಿದೆ ಎಂಬ ಟೀಕೆ ಕೂಡ ವ್ಯಕ್ತವಾಗಿತ್ತು.

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?