ಬಾಳೆಹೊನ್ನೂ:- ಬನ್ನೂರು ಶಿವಣ್ಣ ಗೌಡ ಎಂಬುವವರ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಅಂದಿನ ಕೆಲಸ ಮುಗಿಸಿ ರಾತ್ರಿ ಮದ್ಯಪಾನ ಮಾಡುವ ಸಂದರ್ಭದಲ್ಲಿ ಕಾರ್ಮಿಕನ ಮೇಲೆ ಹಲ್ಲೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ .
ರಾತ್ರಿ ಮದ್ಯಪಾನ ಮಾಡುತ್ತಾ ಕುಳಿತಿದ್ದಾಗ ಮಣಿ , ಶಿವಕುಮಾರ್ , ಕೃಷ್ಣ ಈ ತೋಟದ ಕೆಲಸ ಬಿಟ್ಟು ಬೇರೆ ಕಡೆಗೆ ಹೋಗೋಣ ಎಂದಿದ್ದಾರೆ . ಆದರೆ ಏಕಾಏಕಿ ಹೀಗೆ ಮಾಡುವುದು ಸಮಂಜಸವಲ್ಲ ಕೆಲಸ ಬಿಡುವ ವಿಚಾರ ಮಾಲೀಕರಿಗೆ ತಿಳಿಸೋಣ ಎಂದು ಹಲ್ಲೆಗೀಡಾದ ರವಿ ಹೇಳಿದ್ದಾನೆ , ಇಷ್ಟಕ್ಕೇ ಕೋಪಗೊಂಡ ಮಣಿ , ಶಿವಕುಮಾರ್ , ಕೃಷ್ಣ ಎಂಬ ಕಾರ್ಮಿಕರು ಕತ್ತಿ , ದೊಣ್ಣಿಯಿಂದ ರವಿ ಮೇಲೆ ಹಲ್ಲೆ ನಡೆಸಿದ್ದಾರೆ . ಗಾಯಾಳು ರವಿಗೆ ಬಾಳೆಹೊನ್ನೂರು ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು , ಘಟನಾ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಾಗಿದೆ .
🖊️ವೀರಮಣಿ

Comments
Post a Comment