ಕೊಪ್ಪ :ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕನಿಂದ ಮಹಿಳೆಯ ಮೇಲೆ ಹಲ್ಲೆ,
ಮಹಿಳೆ ಬಸ್ಸಿನಿಂದ ಇಳಿಯುವ ಸಂದರ್ಭದಲ್ಲಿ ಆಕೆಯ ಬಳಿ ಲಗೇಜ್ ಹಾಗೂ ಪುಟ್ಟ ಮಕ್ಕಳು ಮಲಗಿದ್ದ ಕಾರಣ ಮತ್ತು ಸೀಟಿನ ಕೆಳಭಾಗದಲ್ಲಿ ಅವರ ಚಪ್ಪಲಿಗಳು ಸಿಲುಕಿಕೊಂಡಿದ್ದರಿಂದ ಇಳಿಯುವುದು ತಡವಾಗಿದೆ ಈ ಸಂದರ್ಭದಲ್ಲಿ ಕಂಡಕ್ಟರ್ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂಬುದಾಗಿ ನೊಂದ ಮಹಿಳೆ ಆರೋಪಿಸಿದ್ದಾರೆ .
:- ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಿಂದ ಬೆಂಗಳೂರಿನ ಯಶವಂತಪುರಕ್ಕೆ ಕೆ.ಎಸ್ . ಆರ್.ಟಿ.ಸಿ ರಾಜಹಂಸ ಬಸ್ಸಿನ ಮೂಲಕ ತೆರಳುತ್ತಿದ್ದ ಸಿರಾಜ್ ಉನ್ನೀಸಾ ಎಂಬ ಮಹಿಳೆಯ ಮೇಲೆ ಬೆಳಗ್ಗಿನ ಜಾವ ಬಸ್ ನಿರ್ವಾಹಕ ರವಿಕುಮಾರ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪವನ್ನು ಹಲ್ಲೆಗೀಡಾದ ಮಹಿಳೆ ಮಾಡಿದ್ದಾರೆ .
ಬಸ್ಸಿನಿಂದ ಕೆಳಗೆ ಇಳಿದು ತಮ್ಮ ಬಸ್ಸಿನ ಡಿಕ್ಕಿಯಲ್ಲಿಟ್ಟಿದ್ದ ತಮ್ಮ ಲಗೇಜ್ ನ್ನು ಪಡೆದುಕೊಳ್ಳುವ ವೇಳೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ , ಬಸ್ಸಿನ ಮೇಲೆ ಹತ್ತಿ ಬೂಟು ಕಾಲಿನಿಂದ ಆಕೆಯ ಹೊಟ್ಟೆಗೆ ಒದ್ದು ಆಕೆಯ ಮುಖಕ್ಕೂ ಒದ್ದಿದ್ದಾನೆ ಎಂದು ಹಲ್ಲೆಗೀಡಾದ ಮಹಿಳೆ ತಿಳಿಸಿದ್ದಾರೆ . ಘಟನೆ ನಡೆಯುತ್ತಿದ್ದಂತೆಯೆ ಆಟೋ ಚಾಲಕರು , ಹೂ ವ್ಯಾಪಾರಿಗಳು ಸ್ಥಳಕ್ಕೆ ಬಂದು ಬಸ್ಸನ್ನು ಬದಿಗೆ ಹಾಕಿಸಿದರು ಈ ಸಂದರ್ಭದಲ್ಲಿ ನಾನು ನಿರ್ವಾಹಕನ ಬಳಿಯಿದ್ದ ಟಿಕೆಟ್ ಮಿಷನ್ ಅನ್ನು ಕಿತ್ತುಕೊಂಡೆ ನಂತರದಲ್ಲಿ ಪೊಲೀಸರು ಆಗಮಿಸಿದಾಗ ಅವರಿಗೆ ನೀಡಿರುವುದಾಗಿ ತಿಳಿಸಿದರು .
ಘಟನಾ ಸಂಬಂಧ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದಾರೆ . ಸಂಪೂರ್ಣ ತನಿಖೆಯ ನಂತರ ಈ ಕುರಿತಾದ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ . ಘಟನೆಗೆ ಸಂಬಂಧಿಸಿದಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮಹಿಳೆಯ ಮೇಲೆ ಹಲ್ಲೆ ನಡೆಸಿದ ಬಸ್ ನಿರ್ವಾಹಕನನ್ನು ಸಸ್ಪೆಂಡ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ .
🖊️ ವೀರಮಣಿ,

Comments
Post a Comment