ಕಳ್ಳಬಟ್ಟಿ ಅಡ್ಡೆಯ ಮೇಲೆ ಪೊಲೀಸರ ದಾಳಿ,ಆರೋಪಿಗಳು ಪರಾರಿ,!
ಕಳ್ಳಭಟ್ಟಿ ಅಡ್ಡೆ ಮೇಲೆ ಪೊಲೀಸರ ದಾಳಿ,
ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆಗಿಳಿದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸರು ಕಾಫಿ ತೋಟದಲ್ಲಿ ಅಕ್ರಮವಾಗಿ ತಯಾರಿಕೆ ನಡೆಸುತ್ತಿದ್ದ ಕಳ್ಳಭಟ್ಟಿಯನ್ನು ವಶಕ್ಕೆ ಪಡೆದಿದ್ದಾರೆ .
ಕೊಟ್ಟಿಗೆಹಾರ:-ಜಾವಳಿ ಸಮೀಪದ ಕಾಳಿಕಟ್ಟೆ ಗ್ರಾಮದಲ್ಲಿ ಕಳ್ಳಭಟ್ಟಿ ಅಡ್ಡೆಯ ಮೇಲೆ ಬಾಳೂರು ಪೋಲಿಸರು ದಾಳಿ ನಡೆಸಿ ಕಳ್ಳಭಟ್ಟಿ ವಶ ಪಡಿಸಿಕೊಂಡಿದ್ದಾರೆ.
ಕಾಳಿಕಟ್ಟೆ ಗ್ರಾಮದ ಸುರೇಶ್ ಎಂಬುವವರ ತೋಟದಲ್ಲಿದ್ದ ಕಳ್ಳಭಟ್ಟಿ ಅಡ್ಡೆಯ ಮೇಲೆ ಪೋಲಿಸರು ದಾಳಿ ನಡೆಸಿ ೨ ಲೀಟರ್ ಕಳ್ಳಭಟ್ಟಿ ಹಾಗೂ ಸಲಕರಣೆಗಳನ್ನು ವಶಪಡಿಸಿಕೊಂಡು ೧೦೦ ಲೀಟರ್ ಕಳ್ಳಭಟ್ಟಿ ಕೊಳೆಯನ್ನು ನಾಶ ಪಡಿಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಕಾರ್ಯಾಚರಣೆಯಲ್ಲಿ ಬಾಳೂರು ಠಾಣೆ ಪಿಎಸ್‌ಐ ಪವನ್ ಕುಮಾರ್ ಸಿ.ಸಿ, ಸಿಬ್ಬಂದಿಗಳಾದ ಮಹೇಶ್, ವಸಂತ್, ಮನು, ಪ್ರವೀಣ್, ಅಭಿಜಿತ್, ಸತೀಶ್, ಓಂಕಾರ್, ಹೇಮಂತ್, ಪ್ರದೀಪ್ ಇದ್ದರು.
🖊️ವೀರಮಣಿ,



Comments
Post a Comment