ಎರಡನೇ ಮದುವೆಯಾಗಿ ಪತ್ನಿಯ ಮೇಲೆ ದೈಹಿಕ ಕಿರುಕುಳ ನೀಡುತ್ತಿರುವ ಆರೋಪವೊಂದು ಕೇಳಿ ಬಂದಿದೆ,!


 

ಎರಡನೇ ಮದುವೆಯಾಗಿ ಪತ್ನಿಯ ಮೇಲೆ ದೈಹಿಕ ಕಿರುಕುಳ ನೀಡುತ್ತಿರುವ ಆರೋಪವೊಂದು ಕೇಳಿ ಬಂದಿದೆ,!


 ಕೊಪ್ಪ:' ತಾಲೂಕಿನ ಕಾರಗದ್ದೆ ನಿವಾಸಿ ರಂಗಪ್ಪಗೌಡ ಎಂಬುವವರು ಎರಡನೆಯ ಮದುವೆಯಾಗಿ ಪತ್ನಿಯು ಎರಡು ಬಾರಿ ಗರ್ಭವನ್ನು ಧರಿಸಿದಾಗಲೂ ಕೂಡ ಗರ್ಭಪಾತ ಮಾಡಿಸಿ ದೌರ್ಜನ್ಯ ಎಸಗಿದ್ದಾರೆ ಹಾಗೂ ಅವರ ಮೊದಲನೇ ಹೆಂಡತಿಯ ಮಕ್ಕಳನ್ನು ಸೇರಿಸಿಕೊಂಡು ತೀವ್ರತರವಾದ ದೌರ್ಜನ್ಯವನ್ನು ಎಸಗಿದ್ದಾರೆ ಎಂಬ ಆರೋಪವನ್ನು ಎರಡನೆಯ ಪತ್ನಿ ಮಾಡಿದ್ದಾರೆ,


ಗಂಡ ಹಾಗೂ ಮಕ್ಕಳು ನೀನು ಮನೆಯ ಕೆಲಸದವಳು , ನಾವು ಹೇಳಿದ್ದನ್ನು ಕೇಳಿಕೊಂಡು ಮನೆಯಲ್ಲಿ ಬಿದ್ದಿರಬೇಕು ಎಂದು ಧಮ್ಮಿ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅನಾವಶ್ಯಕವಾಗಿ ಜಗಳ ತೆಗೆಯುತ್ತಾರೆ ಹಾಗೂ ನಾಯಿಯನ್ನು ಬಿಟ್ಟು ಕಚ್ಚಿಸಿ ಕಿರುಕುಳ ನೀಡಿರುತ್ತಾರೆ ಎಂದು ರಂಗಪ್ಪಗೌಡ ಅವರ ಪತ್ನಿ ಆರೋಪಿಸಿ ಠಾಣೆಗೆ ದೂರು ಸಲ್ಲಿಸಿದ್ದಾರೆ . ಕುಟುಂಬದಲ್ಲಿ ಕಲಹ ಉಂಟುಮಾಡಿ ನಾಲ್ವರೂ ಕೂಡ ಹಲ್ಲೆಮಾಡಿ ರಂಗಪ್ಪಗೌಡ ಅವರ ಪುತ್ರನಾದ ಅಮಿತ್ ಅವರ ಜೀಪಿನಲ್ಲಿ ತುಂಬಿಕೊಂಡು ಹೋಗಿ ಸಾರಗೋಡು ಭಾಸ್ಕರ್ ಅವರ ತೋಟದ ಮನೆಯ ಗೇಟ್ ಮುಂದೆ ಜೀಪಿನಿಂದ ಎಳೆದು ಹೊರಹಾಕಿದ್ದಾರೆ ಎಂಬ ಗಂಭೀರ ಆರೋಪವನ್ನು ಸಂತ್ರಸ್ತ ಮಹಿಳೆ ಮಾಡಿದ್ದಾರೆ,


ಈ ಕುರಿತು ದೂರು ದಾಖಲು ಮಾಡಿರುವ ಅವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಕೋರಿದ್ದಾರೆ . ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ,






🖊️,ವೀರಮಣಿ,





Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?