ಆಟೋ ಪಲ್ಟಿ:- 4 ಪುಟಾಣಿಮಕ್ಕಳಿಗೆ ಗಾಯ,
ಆಟೋ ಪಲ್ಟಿ:- 4 ಪುಟಾಣಿಮಕ್ಕಳಿಗೆ ಗಾಯ,
ಕೊಪ್ಪ:- ಪಟ್ಟಣದ ಅರಳಿಕಟ್ಟೆ ಗಣಪತಿ ದೇವಾಲಯದ ಹಿಂಬಾಗದಲ್ಲಿರುವ ಎಸ್‌ವಿಟಿ ರಸ್ತೆಯಲ್ಲಿ ಇಂದು ಸಂಜೆ ಶಾಲಾಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೋ ಪಲ್ಟಿಯಾದ ಪರಿಣಾಮ ನಾಲ್ವರು ಮಕ್ಕಳು ಗಾಯಗೊಂಡಿದ್ದು, ದೊಡ್ಡ ದುರಂತವೊಂದು ತಪ್ಪಿದೆ.
ಸೆಂಟ್ ಜೋಸೆಫ್ ಕಾನ್ವೆಂಟ್ ನಿಂದ 8 ಶಾಲಾಮಕ್ಕಳನ್ನು ತುಂಬಿಸಿಕೊಂಡು ಇಳಿಜಾರು ರಸ್ತೆಯಲ್ಲಿ ಸಾಗುತ್ತಿರುವಾಗ ಏಕಾಏಕಿ ಬ್ರೇಕ್ ಫೇಲ್ ಆಗಿ ಆಟೋ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಚಾಲಕ ರಾಘವೇಂದ್ರನಗರದ ಪಳನಿ ಸ್ವಾಮಿ(ಮಣಿ) ತಕ್ಷಣವೇ ಅಟೋವನ್ನು ಸಮತಟ್ಟಾದ ಎಲ್‌ಐಸಿ ರಸ್ತೆಯ ಕಡೆಗೆ ತಿರುಗಿಸಿ ಸಮಯ ಪ್ರಜ್ಞೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಆಟೋ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಚಾಲಕ ಹಾಗೂ ನಾಲ್ವರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಈ ರಸ್ತೆಯಲ್ಲಿ ಕಾನ್ವೆಂಟ್ ಶಾಲೆ ಹಾಗೂ ಜಿಜೆಸಿ ಹೈಸ್ಕೂಲುಗಳು ಆಸುಪಾಸಿನಲ್ಲಿದ್ದು ಸಂಜೆ ಶಾಲೆಬಿಡುವ ಸಂದರ್ಭದಲ್ಲಿ ಏಕಕಾಲದಲ್ಲಿ ನೂರಾರು ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಸಂಚಾರಿಸುತ್ತಾರೆ. ಇದೇ ಸಂದರ್ಭದಲ್ಲಿ ಅವಘಡ ಸಂಭವಿಸಿದ್ದು ಅದೃಷ್ಟವಶಾತ್ ಹೆಚ್ಚಿನ ಅನಾಹುತಗಳು ಸಂಭವಿಸಿಲ್ಲ.
ಗಾಯಗೊಂಡಿದ್ದ ಪುಟಾಣಿಗಳಿಗೆ ಕೊಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕೊಪ್ಪ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.
🖋 ಮಜೀದ್ ಕೊಪ್ಪ



Comments
Post a Comment