ಚಿಕ್ಕಮಗಳೂರು ಮೂಲದ ಗಣೇಶ್ ಎಂಬ ಯೋಧನ ಮೃತ ದೇಹವು ಬಿಹಾರದಲ್ಲಿ ಪತ್ತೆ,





 


ಚಿಕ್ಕಮಗಳೂರು:- ತಾಲೂಕಿನ ಖಾಂಡ್ಯ ಹೋಬಳಿಯ ಮಸೀಗದ್ದೆ ಮೂಲದ ಭಾರತೀಯ ಸೇನೆಯ ಯೋಧ ಗಣೇಶ್ ಅವರು ಏಪ್ರಿಲ್ 24 ರಂದು ಊರಿಗೆ ಬಂದಿದ್ದು ಜೂನ್ 09 ರಂದು ಮನೆಯಿಂದ ವಾಪಸ್ ಕರ್ತವ್ಯದ ಸಲುವಾಗಿ ತೆರಳಿದ್ದರು ಎನ್ನಲಾಗಿದೆ . ವಾಪಸ್ ಗುವಾಹಟಿಗೆ ಸಾಗುವಾಗ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ಅವರ ಸಾವಿಗೆ ನಿಖರ ಕಾರಣಗಳೇನು ಎಂದು ಈ ವರೆಗೆ ತಿಳಿದುಬಂದಿಲ್ಲ .  ಗಣೇಶ್ ಅವರು ಮಸಿಗದೆಯಿಂದ ವಾಪಸ್ ಗುವಾಹಟಿಗೆ ಸಾಗುವಾಗ ಮೃತಪಟ್ಟಿದ್ದಾರೆ . ಕಿಶನ್‌ಗಂಜ್ ಪ್ರದೇಶದಲ್ಲಿ ಪರಿಶೀಲನೆಯಲ್ಲಿ ತೊಡಗಿದ್ದೇವೆ ಎಂದು ಸೇನೆಯ ತಂಡದವರು ತಿಳಿಸಿದ್ದಾರೆ . ಪಾರ್ಥಿವ ಶರೀರವನ್ನು ಇನ್ನು ಎರಡು ದಿನದಲ್ಲಿ ಕಳಿಸಬಹುದು, ಸಂಬಂಧಪಟ್ಟವರೊಂದಿಗೆ ಫೋನ್‌ನಲ್ಲಿ ಸಂಪರ್ಕದಲ್ಲಿ ಇದ್ದೇವೆ ,



 ತಾಲೂಕಿನ ಖಾಂಡ್ಯ ಹೋಬಳಿ ಮಸೀಗದ್ದೆಯ ಯೋಧ ಗಣೇಶ್ ಅವರು ಬಿಹಾರದಲ್ಲಿ ಆಕಸ್ಮಿಕವಾಗಿ ಮೃತಪಟ್ಟಿದ್ದ ವಿಚಾರ ತಿಳಿದು ವೀರ ಯೋಧ ಗಣೇಶ್ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಶಾಸಕ ಟಿ ಡಿ ರಾಜೇಗೌಡ ಹಾಗೂ ಮಾಜಿ ಶಾಸಕ ಡಿ ಎನ್ ಜೀವರಾಜ್,  ಸಾಂತ್ವಾನ ಹೇಳಿದ್ದಾರೆ.ಸೇನಾ ಕಮಾಂಡೆಂಟ್ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿ ಮೃತ ಯೋಧನ ಪಾರ್ಥಿವ ಶರೀರವನ್ನು ಊರಿಗೆ ತರುವ ವ್ಯವಸ್ಥೆಯ ಮತ್ತು ಅಂತಿಮ ಸಂಸ್ಕಾರ ನಡೆಸುವ ಕುರಿತು ಚರ್ಚೆ ನಡೆಸಿದೆ ಎಂದು ತಿಳಿಸಿದ್ದಾರೆ .








🖊️ ವೀರಮಣಿ,







Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?