ಶೃಂಗೇರಿ,ಸ್ಕೂಲ್ ಟ್ರಿಪ್ ವಾಹನ ಅಪಘಾತ,ಅದೃಷ್ಟವಶಾತ್ ಮಕ್ಕಳು ಅಪಾಯದಿಂದ ಪಾರು,
ಶೃಂಗೇರಿ:- ತಾಲೂಕಿನ ಮೆಣಸೆ ಗ್ರಾಮಪಂಚಾಯತ್ ವ್ಯಾಪ್ತಿಯ ಶಿಡ್ಲೆ ಗಣಪತಿ ದೇವಸ್ಥಾನದ ಬಳಿ ಶಾಲಾ ಮಕ್ಕಳಿದ್ದ ಸ್ಕೂಲ್ ಟ್ರಿಪ್ ಓಮಿನಿ ಕಾರಿಗೆ ಇನೋವಾ ಕಾರ್ ಗುದ್ದಿದ ಪರಿಣಾಮ ಓಮಿನಿ ಕಾರ್ ಪಲ್ಟಿಯಾಗಿದ್ದು ಅದೃಷ್ಟವಶಾತ್ ವಾಹನದಲ್ಲಿದ್ದ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ʼʼವೈಟ್ ಬೋರ್ಡ್ ಕಾರಿನಲ್ಲಿ ಸ್ಕೂಲ್ ಟ್ರಿಪ್,, ಅನಾಹುತವಾದಲ್ಲಿ ಜವಾಬ್ದಾರರು ಯಾರು ?
ಸಂಬಂಧ ಪಟ್ಟ ಅಧಿಕಾರಿಗಳು ಉತ್ತರಿಸಿ,
ಓಮ್ನಿ ಹಾಗೂ ಇನೋವಾ ನಡುವಿನ ಅಪಘಾತದಲ್ಲಿ ಮಕ್ಕಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ವೈಟ್ ಬೋರ್ಡ್ ಹೊಂದಿದ ಓಮ್ನಿ ಕಾರಿನಲ್ಲಿ ಸುಮಾರು 10 ಮಂದಿ ಶಾಲಾ ಮಕ್ಕಳಿದ್ದರು ಎಂದು ಹೇಳಲಾಗಿದೆ. ಒಂದು ವೇಳೆ ಯಾರಾದರೂ ತೀವ್ರತರವಾದ ಗಾಯಕ್ಕೀಡಾದಲ್ಲಿ ಅಥವಾ ಬೇರಾವುದೇ ಅಪಾಯಗಳಾಗಿದ್ದಲ್ಲಿ ಯಾವುದೇ ವಿಮೆ ಸಿಗುವುದಿಲ್ಲ, ಅಂತಹ ಸಂಧರ್ಭದಲ್ಲಿ ಇದಕ್ಕೆ ಹೊಣೆ ಯಾರು ಎಂಬ ಪ್ರಶ್ನೆ ಸಾರ್ವಜನಿಕವಾಗಿ ಕೇಳಿ ಬಂದಿದೆ. ಈ ರೀತಿ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆಗಾಗಿ ಬಳಸುತ್ತಿರುವುದರ ಕುರಿತು RTO ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ತೆಗೆದುಕೊಳ್ಳಬೇಕಿದೆ.
🖋 ಮಜೀದ್ ಕೊಪ್ಪ

Comments
Post a Comment