ಕೊಪ್ಪ, ಯೂತ್ ಫಾರ್ ಸೇವಾ ಸಂಸ್ಥೆಯಿಂದ ಶಾಲಾಮಕ್ಕಳಿಗೆ ಕಿಟ್ ವಿತರಣೆ,
ಕೊಪ್ಪ, ಯೂತ್ ಫಾರ್ ಸೇವಾ ಸಂಸ್ಥೆಯಿಂದ ಶಾಲಾಮಕ್ಕಳಿಗೆ ಕಿಟ್ ವಿತರಣೆ,
18/06/2022 ರಂದು, ಯೂತ್ ಫಾರ್ ಸೇವಾ, ಸಂಘ ಬೆಂಗಳೂರು ಇವರು ನುಗ್ಗಿ ಗ್ರಾಮದ ಬಪ್ಪುಂಜಿ ಹಿರಿಯ ಪ್ರಾಥಮಿಕ ಶಾಲೆ ದೇವನ್ ಎಸ್ಟೇಟ್ ಕಿರಿಯ ಪ್ರಾಥಮಿಕ ಶಾಲೆ, H ಹೊಸೂರು ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ,ಬೇರುಕೂಡುಗೆ ಕಿರಿಯ ಪ್ರಾಥಮಿಕ ಶಾಲೆ, ನುಗ್ಗಿ ಕಿರಿಯ ಪ್ರಾಥಮಿಕ ಶಾಲೆ, ಈ ಗ್ರಾಮೀಣ ಮಟ್ಟದ ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ಬುಕ್ ಪೆನ್ ಪೆನ್ಸಿಲ್ ಜಾಮಿಟ್ರಿ ಮಳೆಗಾಲದಲ್ಲಿ ಹಾಕುವ ರೈನ್ ಕೊಟ್ಟು ಸ್ಕೂಲ್ ಬ್ಯಾಗ್ ಇನ್ನಿತರೇ ಶಾಲಾ ಮಕ್ಕಳಿಗೆ ಉಪಯೋಗವಾಗುವ ವಸ್ತುಗಳನ್ನು ಉಚಿತವಾಗಿ ನೀಡಿದರು, ಈ ಸಂದರ್ಭದಲ್ಲಿ ಯೂತ್ ಫಾರ್ ಸೇವಾ ಸಂಸ್ಥೆಯ ನಿರ್ದೇಶಕರು ಹಿರಿಯರಾದ ಶ್ರೀ ಮತಿ ಚಾಯಕ್ಕ ನವರು ಬೆಂಗಳೂರು. ಹಾಗು ನಿವೃತ್ತ ಕಾವೇರಿ ಗ್ರಾಮೀಣ ಬ್ಯಾಂಕ್ ಉದ್ಯೋಗಿ ಕೃಷ್ಣಕೊಪ್ಪ ರವರು, ನಿವೃತ್ತ ಅಂಚೆ ಇಲಾಖೆಯ ಅಧಿಕಾರಿಗಳದ ಅನಂತರಾಮ್ ಕೊಪ್ಪ,ಮಂಜೇಶ್ ಬಾಳಗಡಿ ಕೊಪ್ಪ, ಹರೀಶ್, ಹೆಚ್ ಆರ್ ಜಗದೀಶ್ ಮತ್ತು ಇತರರು ಎಲ್ಲ ಶಾಲೆಗಳಿಗೆ ಖುದ್ದು ತೆರಳಿ ವಿತರಿಸಿದರು... ಗ್ರಾಮೀಣ ಮಟ್ಟದ ಮಕ್ಕಳು ಕೂಡ ಈ ದೇಶದ ಉನ್ನತ ವ್ಯಾಸಂಗವನ್ನು ಮಾಡಬೇಕು ಈ ದೇಶದ ಉನ್ನತ ಪ್ರಜೆಗಳಾಗಬೇಕು ಎಂದು ಯೂತ್ ಫಾರ್ ಸೇವಾ ಸಂಘದವರು ಉಚಿತವಾಗಿ ನೀಡಿರುವ ವಸ್ತುಗಳನ್ನು ಉತ್ತಮ ರೀತಿಯಾಗಿ ಬಳಸಿಕೊಂಡು ಮುಂದಿನ ಶೈಕ್ಷಣಿಕ ಜೀವನ ಮುಂದುವರಿಸಬೇಕು ಎಂದು ಶುಭ ಕೋರಿದರು. ಕಾರ್ಯಕ್ರಮದ ಯಶಸ್ವಿಗೆ ಎಲ್ಲ ಶಾಲೆಯ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಮಕ್ಕಳು ಎಸ್ಡಿಎಂಸಿ ಯಾವರು ಹಾಜರಿದ್ದರು,
🖊️ವೀರಮಣಿ

Comments
Post a Comment