ಸಿಟ್ಟಿಗೆದ್ದ ಶಿಕ್ಷಕನಿಂದ ಬಾಸುಂಡೆ ಬರುವಂತೆ ಏಟು,ಬಾಲಕನ ಪೋಷಕರಿಂದ ತೀವ್ರ ಆಕ್ರೋಶ,
ಕೊಪ್ಪ:- ಶಿಕ್ಷಕರೋರ್ವರ ಮಾತಿಗೆ ವಿದ್ಯಾರ್ಥಿ ಎದುರುತ್ತರ ನೀಡಿದ ಎಂಬ ಕಾರಣಕ್ಕೆ, ಶಿಕ್ಷಕ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದಿರುವ ಘಟನೆ ಕೊಪ್ಪದ ಭಂಡಿಗಡಿ ಶಾಲೆಯಲ್ಲಿ ನಡೆದಿದೆ,
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಭಂಡಿಗಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಶ್ರೇಯಸ್ ಎಂಬ ಆರನೇ ತರಗತಿ ಬಾಲಕನಿಗೆ ಕನ್ನಡ ಪಾಠ ಮಾಡುತ್ತಿದ್ದ ಶಿಕ್ಷಕ ನಾಗರಾಜ್ ಸರಿಯಾಗಿ ಬರೆಯುವಂತೆ ಹೇಳಿದ್ದಾರೆ . ಈ ಸಂದರ್ಭದಲ್ಲಿ ವಿದ್ಯಾರ್ಥಿ ಎದುರುತ್ತರ ನೀಡಿದ ಪರಿಣಾಮ ಸಿಟ್ಟಿಗೆದ್ದ ಶಿಕ್ಷಕ ಹೊಡೆದಿದ್ದಾರೆ . ವಿದ್ಯಾರ್ಥಿಯ ಕಾಲಿಗೆ ಬೆನ್ನಿಗೆ ಶಿಕ್ಷಕ ನಾಗರಾಜ್ ಮನ ಬಂದಂತೆ ಬಾಸುಂಡೆ ಬರುವಂತೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ .
🖊️ ವೀರಮಣಿ


Comments
Post a Comment