ಕುವೈಟ್:ಕರ್ನಾಟಕ ಕಲ್ಚರಲ್ ಪೌಂಡೇಶನ್(ಕೆಸಿಎಫ್) ಕುವೈಟ್ ರಾಷ್ಟ್ರೀಯ ಅಧ್ಯಕ್ಷರಾಗಿ ಹುಸೈನ್ ಮುಸ್ಲಿಯಾರ್ ಎಮ್ಮೆಮಾಡು ಆಯ್ಕೆ











ಕುವೈಟ್:ಕರ್ನಾಟಕ ಕಲ್ಚರಲ್ ಪೌಂಡೇಶನ್(ಕೆಸಿಎಫ್) ಕುವೈಟ್ ರಾಷ್ಟ್ರೀಯ  ಅಧ್ಯಕ್ಷರಾಗಿ ಹುಸೈನ್ ಮುಸ್ಲಿಯಾರ್ ಎಮ್ಮೆಮಾಡು ಆಯ್ಕೆ .


         ಕುವೈಟ್ ಬದರ್ ಅಲ್ ಸಭಾಂಗಣದಲ್ಲಿ ಜರುಗಿದ ವಾರ್ಷಿಕ ಮಹಾಸಭೆಯಲ್ಲಿ  ನಿಕಟಪೂರ್ವ ಅಧ್ಯಕ್ಷರಾದ ಅಬ್ದುಲ್ ರಹಮಾನ್ ಸಖಾಫಿವವರ ಅಧ್ಯಕ್ಷತೆ ಯಲ್ಲಿ  2022-23 ನೆ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


     
 ಪ್ರ.ಕಾರ್ಯದರ್ಶಿಯಾಗಿ ಯಾಕೂಬ್ ಕಾರ್ಕಳ ಆಯ್ಕೆಯಾದರು. ನಿಕಟಪೂರ್ವ ಕೋಶಾಧಿಕಾರಿ  ಮೂಸ ಇಬ್ರಾಹಿಂ ಕೋಶಾಧಿಕಾರಿಯಾಗಿ ಪುನರಾಯ್ಕೆಯಾದರು..
 ಸಂಘಟನಾ ವಿಭಾಗದ  ಅಧ್ಯಕ್ಷರಾಗಿ ಉಮರ್ ಝುಹರಿ ಕಾರ್ಯದರ್ಶಿ ಸಮೀರ್ ಎಂಜಿನಿಯರ್  ಶಿಕ್ಷಣ ವಿಭಾಗದ  ಅಧ್ಯಕ್ಷರಾಗಿ ಬಾಧುಶ ಸಖಾಫಿ ಮಾದಾಪುರ ಕಾರ್ಯದರ್ಶಿ ಮುಸ್ತಫಾ ಉಳ್ಳಾಲ. ಸಾಂತ್ವನ ವಿಭಾಗದ ಅಧ್ಯಕ್ಷ ರಾಗಿ ಇಕ್ಬಾಲ್ ಕಂದಾವರ ಕಾರ್ಯದರ್ಶಿ ಮಲಿಕ್ ಸೂರಿಂಜೆ .
ಅಡ್ಮಿನ್ ವಿಭಾಗದ ಅಧ್ಯಕ್ಷ ರಾಗಿ ಅಬ್ಬಾಸ್ ಬಳಂಜ ಕಾರ್ಯದರ್ಶಿ  ಉಸ್ಮಾನ್ ಕೋಡಿ .ಪ್ರಕಾಶ ನ ವಿಬಾಗದ ಅಧ್ಯಕ್ಷ ರಾಗಿ ಶಾಹುಲ್ ಹಮೀದ್  ಸಅದಿ ಝುಹ್ರಿ  ಕಾರ್ಯದರ್ಶಿ ಇಬ್ರಾಹಿಂ ವೇನೂರ್. ಇಹ್ಸಾನ್ ವಿಭಾಗದ ಅಧ್ಯಕ್ಷ ರಾಗಿ ಫಾರೂಕ್ ಸಖಾಫಿ ಕಾರ್ಯದರ್ಶಿ ತೌಫೀಕ್ ಕಾರ್ಕಳ ನೇಮಕಗೊಂಡರು



 ಸಭೆಯ ನಿಯಂತ್ರಕ(ಆರ್ ಓ) INC ಸಾಂತ್ವನ ವಿಭಾಗ ಅಧ್ಯಕ್ಷರಾದ ಅಲಿ ಮುಸ್ಲಿಯಾರ್ ಬಹರೈನ್ ಅವರ ನೇತ್ರತ್ವದಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.  
  INC COUNCILLOR ಗಳಾಗಿ ಅಬ್ದುಲ್ ರಹ್ಮಾನ್ ಸಖಾಫಿ ಮತ್ತು ಝಕರಿಯಾ ಆನೇಕಲ್ ಅವರನ್ನು ನೇಮಿಸಲಾಯಿತು.

ಸಮಿತಿಯ ವರದಿಯನ್ನು ಮಾಜಿ ಕಾರ್ಯದರ್ಶಿ ಝಕರಿಯ್ಯಾ ಆನೆಕಲ್ ವಾಚಿಸಿ, ಮೂಸಇಬ್ರಾಹಿಂ ಲೆಕ್ಕ ಪತ್ರ ವನ್ನು ಮಂಡಿಸಿ ಸಭೆಯಲ್ಲಿ ಅಂಗೀಕರಿಸಲಾಯಿತು.



      ಅಧ್ಯಕ್ಷ ಬಾಷಣ ನಡೆಸಿದ ಅಬ್ದುಲ್ ರಹಮಾನ್  ಸಖಾಫಿ ಯವರು ಸ್ವಲಾತ್ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬರುವುದರೊಂದಿಗೆ ನಾವು ಮಾಡುವ ಎಲ್ಲಾ ಕಾರ್ಯ ಗಳು ಆತ್ಮಾರ್ಥದಿಂದ ಕೂಡಿರಬೇಕು ಹಾಗೂ ಕೆಸಿಎಫ್ ನ ಉನ್ನತಿಗಾಗಿ  ಕೈಜೋಡಿಸಿದ ಎಲ್ಲರನ್ನೂ  ಅಭಿನಂದಿಸಿದರು.



ಹುಸೈನ್ ಮುಸ್ಲಿಯಾರ್ ಕಾರ್ಯಕರ್ತರಿಗೆ ಸಂಘಟನೆ ತರಗತಿ ನಡೆಸಿ  ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ಕಾರ್ಯಚರಿಸುವ ಪ್ರತಿ ಸಮಿತಿಗಳ ಉದ್ದೇಶ ಮತ್ತು ಅದರ ಕಾರ್ಯವೈಕರಿಯ್ಯಗಳ ಕುರಿತು ಸವಿಸ್ತಾರವಾಗಿ ವಿವರಿಸಿ ಕೆಸಿಎಫ್ ನಲ್ಲಿ  ಕಾರ್ಯಕರ್ತನ ಪ್ರವೃತ್ತಿ ಹೇಗಿರಬೇಕು ತಿಳಿಸಿದರು.
ಝಕರಿಯ್ಯಾ ಆನೇಕಲ್ ಮಾತಾಡಿ ಸಾಂತ್ವನ ಸಮಿತಿಯ ಅಧೀನದಲ್ಲಿ ಕಳೆದ ಎರಡು ವರ್ಷಗಳಲ್ಲಿ ನಡೆಸಿದ ಸಾಂತ್ವನ ಕಾರ್ಯಗಳು ವಿಶೇಷವಾಗಿ  ಕೋವಿಡ್ ಸಮಯದಲ್ಲಿ ನಡೆಸಿದ ಸಾಂತ್ವನ ಕೆಲಸಗಳು ಅನಿವಾಸಿ ಕನ್ನಡಿಗರ ಸಮಸ್ಯೆ ಗಳಿಗೆ ಸ್ಪಂದಿಸಿದ ಕಾರ್ಯವನ್ನು ವಿವರಿಸಿ ಹಾಲಿ ಸಮಿತಿಯು ನಡೆಸಿದ ಕಾರ್ಯ ವೈಕರಿಗಳನ್ನು ಹೇಳಿ ಬಾವುಕರಾದರು.
ಉಮರ್ ಝುಹರಿಯವರ ದುವಾ ದೊಂದಿಗೆ  ಕಲಂದರ್ ಶಾಪಿ ಯವರ ಕಿರಾತ್ ನೊಂದಿಗೆ  ಪ್ರಾರಂಭಿಸಿದ ಸಭೆಯನ್ನು ಬಾಧುಶ ಸಖಾಫಿ ಉದ್ಘಾಟನೆ ಗೈದರು  
  ಫಾರೂಕ್ ಸಖಾಫಿ,ಶಾಹುಲ್ ಹಮೀದ್ ಸಹದಿ, ಬಶೀರ್ ಸಖಾಫಿ ಆಶಂಷಣಗೈದರು. ಝಕಾರಿಯ ಆನೆಕಲ್ ಸ್ವಾಗತಿಸಿ ಮುಸ್ತಾಫ ಉಳ್ಳಾಲ ಧನ್ಯವಾದ ನಡೆಸಿ ಕೊನೆಯಲ್ಲಿ ಮೂರು ಸ್ವಲಾತಿನೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.






 










Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?