ಶಾಲಾ ಮಕ್ಕಳಿಗೆ ಶಾಸನಬದ್ಧವಾದ ಚುನಾವಣಾ ಮಾದರಿಯಲ್ಲಿಯೇ ಬ್ಯಾಲೆಟ್ ಪೇಪರ್ ಮೂಲಕ ಮತದಾನ
ಶಾಲಾ ಮಕ್ಕಳಿಗೆ ಶಾಸನಬದ್ಧವಾದ ಚುನಾವಣಾ ಮಾದರಿಯಲ್ಲಿಯೇ ಬ್ಯಾಲೆಟ್ ಪೇಪರ್ ಮೂಲಕ ಮತದಾನ,
ದಿನಾಂಕ : 24-06-2022 ರಂದು ನ.ರಾ.ಪುರ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಕರ್ಕೇಶ್ವರ ಶಾಲೆಯಲ್ಲಿ " ಶಾಲಾ ಮಕ್ಕಳ ಸಂಸತ್ತು " ರಚನೆಗೆ ಸಂಬಂಧಿಸಿದಂತೆ ಶಾಲಾ ಆವರಣದಲ್ಲಿ ಚುನಾವಣೆಯನ್ನು ನಡೆಸಲಾಯಿತು. ಈ ಚುನಾವಣೆಯಲ್ಲಿ ಒಟ್ಟು 11 ಸ್ಥಾನಗಳಿಗೆ ಒಟ್ಟು 22 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಶಾಲಾ ಮಕ್ಕಳಿಗೆ ಶಾಸನಬದ್ಧವಾದ ಚುನಾವಣಾ ಮಾದರಿಯಲ್ಲಿಯೇ ಬ್ಯಾಲೆಟ್ ಪೇಪರ್ ಮೂಲಕ ಮತದಾನ ಮಾಡಿಸಲಾಯಿತು. ಶಾಲಾ ಮಕ್ಕಳು ಬಹಳ ಉತ್ಸಾಹದಿಂದ ಚುನಾವಣೆಯಲ್ಲಿ ಭಾಗವಹಿಸಿ ಮತಗಳನ್ನು ಹಾಕಿದರು. ಈ ಚುನಾವಣೆಯಲ್ಲಿ ಚುನಾವಣಾ ಕಮೀಷನರ್ ಆಗಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಯುತ ಬಾಲಚಂದ್ರ. PRO ಆಗಿ ಶಾಲೆಯ ಸಹ ಶಿಕ್ಷಕರಾದ ಶ್ರೀಯುತ ನಟರಾಜ. APRO ಆಗಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ಸುಬ್ಬರಾಯ. PO ಗಳಾಗಿ ಕುಮಾರಿ. ಸ್ವಪ್ನಾ ಹಾಗೂ ಶ್ರೀಮತಿ ಸುಮತಿಯವರು ಕಾರ್ಯವನ್ನು ನಿರ್ವಹಿಸಿದರು. ಚುನಾವಣಾ ಸಂಧರ್ಭದಲ್ಲಿ ಸೆಕ್ಟರ್ ಆಫೀಸರ್ ಆಗಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಯುತ ಸುರೇಶಪ್ಪ.ಹೆಚ್.ವಿ.ರವರು. ಮೈಕ್ರೋ ಅಬ್ಜೋವರ್ ಯಾಗಿ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಶ್ರೀಯುತ ಮಾಲತೇಶ್ ಗಾಣದ್ ರವರು ಮತ್ತು ಕರ್ಕೇಶ್ವರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಯುತ ರಾಜೇಶ್ ರವರು ಹಾಗೂ ಪಿ.ಡಿ.ಓ.ರವರಾದ ಶ್ರೀಮತಿ ವನಿತ ರವರು. ಶಾಲಾ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಜಯರಾಮ್ ರವರು ಭೇಟಿ ನೀಡಿದ್ದರು ಮತ್ತು ಈ ಸಂಪೂರ್ಣ ಚುನಾವಣಾ ಪ್ರಕ್ರಿಯೆಯ ನಿರ್ದೇಶಕರಾಗಿ ಶಾಲೆಯ ಹಿರಿಯ ಶಿಕ್ಷಕಿಯವರಾದ ಶ್ರೀಮತಿ ಸುಧಾಮಣಿರವರು ಹಾಗೂ ಚುನಾವಣೆಯ ಸಂಚಾಲಕರಾಗಿ ಸಹ ಶಿಕ್ಷಕರಾದ ಶ್ರೀ ರಾಜಶೇಖರ್ ರವರು ಕರ್ತವ್ಯ ನಿರ್ವಹಿಸಿದರು.
1. ಮುಖ್ಯಮಂತ್ರಿಯಾಗಿ - ಕುಮಾರಿ ರಕ್ಷಾ .ಎಸ್ - 7 ನೇತರಗತಿ.
2. ಶಿಕ್ಷಣ ಮಂತ್ರಿಯಾಗಿ - ಕುಮಾರಿ ಅದ್ವಿತ. ಎಮ್ - 6 ನೇತರಗತಿ.
3. ಆರೋಗ್ಯ ಮಂತ್ರಿಯಾಗಿ - ಕುಮಾರಿ ಕವನ - 7 ನೇತರಗತಿ.
4. ಅಹಾರ ಮಂತ್ರಿಯಾಗಿ - ಕುಮಾರಿ ಸಾನಿಕ - 7 ನೇತರಗತಿ.
5. ಕ್ರೀಡಾ ಮಂತ್ರಿಯಾಗಿ - ಕುಮಾರ. ರೂಪೇಶ್ - 7 ನೇತರಗತಿ.
6. ನೀರಾವರಿ ಮಂತ್ರಿಯಾಗಿ - ಕುಮಾರ. ಪ್ರವಚನ್ - 6 ನೇತರಗತಿ.
7. ಸ್ವಚ್ಛತಾ ಮಂತ್ರಿಯಾಗಿ - ಕುಮಾರಿ ಜ್ಯೋತಿ - 7 ನೇತರಗತಿ.
8. ಗ್ರಂಥಾಲಯ ಮಂತ್ರಿಯಾಗಿ - ಕುಮಾರಿ ಸಹನ - 7 ನೇತರಗತಿ.
9. ತೋಟಗಾರಿಕಾ ಮಂತ್ರಿಯಾಗಿ - ಕುಮಾರಿ ಆತ್ಮೀಯಾ - 6 ನೇತರಗತಿ.
10. ರಕ್ಷಣಾ ಮಂತ್ರಿಯಾಗಿ - ಕುಮಾರ ಸಾನ್ವಿತ್ - 6 ನೇತರಗತಿ.
11. ಸಮಯ ಪಾಲನೆ ಮಂತ್ರಿಯಾಗಿ - ಕುಮಾರ ಜಿತೇಶ್ - 7 ನೇತರಗತಿ.
ಆಯ್ಕೆಯಾದರು. ಆಯ್ಕೆಯಾದ ಎಲ್ಲಾ ಮಕ್ಕಳಿಗೂ ಶುಭ ಕೋರಲಾಯಿತು.
🖋 ವೀರಮಣಿ,





Comments
Post a Comment