ಖಾಂಡ್ಯ,ಬಿದರೆಗ್ರಾಮ ಆಶ್ರಯ ನಿವೇಶನಕ್ಕಾಗಿ ಟೆಂಟ್ ಹಾಕಿ ಪ್ರತಿಭಟನೆ,


 

ಚಿಕ್ಕಮಗಳೂರು ಜಿಲ್ಲೆ ಹಾಗೂ ತಾಲ್ಲೂಕು ) ಬಾಂಡ್ಯ ಹೋಬಳಿ , ಬಿದರ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಿದರೆ ಗ್ರಾಮದ ಸರ್ವೆ ನಂಬರ್ 292 ರಲ್ಲಿ 4,00 ಏಕರೆ ವಿಸ್ತೀರ್ಣದ ಜಮೀನನ್ನು ಆಶ್ರಯ ನಿವೇಶನಕ್ಕಾಗಿ ಕಾಯ್ದಿರಿಸಿ ಮಾನ್ಯ ಜಿಲ್ಲಾಧಿಕಾರಿಗಳು ಚಿಕ್ಕಮಗಳೂರು ಜಿಲ್ಲೆ ಇವರು ದಿನಾಂಕ : 04 / 01 / 2013 ರಂದು ಆದೇಶಿಸಿರುತ್ತಾರೆ . ಆದೇಶದ ಪ್ರತಿಯಲ್ಲಿ ತಿಳಿಸಿದಂತೆ ಸದರಿ ಜಾಗದಲ್ಲಿ ಮರಗಳಿದ್ದಲ್ಲಿ ಅರಣ್ಯ ಇಲಾಖೆಯಿಂದ ತೆರವು ಮಾಡಿಕೊಡುವುದು ಎಂಬುದಾಗಿ ತಿಳಿಸಿ ಸಂಬಂಧಪಟ್ಟ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು , ಚಿಕ್ಕಮಗಳೂರು ವೃತ್ತ , ಚಿಕ್ಕಮಗಳೂರು ಇವರಿಗೂ ಮಾಹಿತಿ ನೀಡಿರುತ್ತಾರೆ . ಆದರೂ ಇದುವರೆಗೂ ಮರಗಳನ್ನು ತೆರವುಗೊಳಿಸಿರುವುದಿಲ್ಲ ,




ಚಿಕ್ಕಮಗಳೂರು:- ತಾಲ್ಲೂಕಿನ ಖಾಂಡ್ಯ ಹೋಬಳಿಯ ಬಿದರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಚಂದ್ರವಳ್ಳಿ ಎಂಬಲ್ಲಿ ಅಶ್ರಯ ನಿವೇಶನ ರಹಿತರು ಸಾರ್ವಜನಿಕ ಅಶ್ರಯ ಸಮಿತಿಗೆ ಮೀಸಲಿಟ್ಟ ಜಾಗದಲ್ಲಿ 100 ಕ್ಕೂ ಹೆಚ್ಚು ಜನ 80 ಫಲಾನುಭವಿಗಳು 60 ಟೆಂಟ್ ಹಾಕಿ ಪ್ರತಿಭಟನೆ ನಡೆಸಿದರು. ಇವರು ಸುಮಾರು 80 ವರ್ಷದಿಂದ ಕೂಲಿ ಕಾರ್ಮಿಕರಾಗಿ ಕರಡಿಖಾನ್ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದು, ಇವರಿಗೆ ಚುನಾವಣಾ ಗುರುತಿನ ಚೀಟಿ ಆಧಾರ್ ಕಾರ್ಡ್ ಪಡಿತರ ಚೀಟಿ ಹೊಂದಿದ್ದು, ಇವರಿಗೆ ಆಶ್ರಯ ನಿವೇಶನಕ್ಕೇ ಮೀಸಲಿಟ್ಟ 4 ಎಕರೆ ಪ್ರದೇಶವನ್ನು ಡಿಮೂಡ್ ಎಂದು ಅರಣ್ಯ ಇಲಾಖೆಯವರು ಒಪ್ಪಿಗೆ ನೀಡುತ್ತಿಲ್ಲ. ಹಾಗೂ ಸಾರ್ವಜನಿಕರಿಗೆ ಮೀಸಲಿಟ್ಟ ಜಾಗದಲ್ಲಿ ಫಲಾನುಭವಿಗಳು ಟೆಂಟ್ ಹಾಕಿ ಪ್ರತಿಭಟನೆ ನಡೆಸಿರುತ್ತಾರೆ ಹಾಗೂ ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ ಡಿ ರಾಜೇಗೌಡ ಮುತ್ತೋಡಿ ವಲಯ ಅರಣ್ಯಾಧಿಕಾರಿಗಳಾದ ಕಿರಣ್ ಕುಮಾರ್, ವನ ಪಾಲಕ ಸಲಿಂ ಪ್ರತಿಭಟನೆನಿರತ ಸ್ಥಳಕ್ಕೆ ಭೇಟಿ ನೀಡಿ ಡಿಫ್ಓ ಮತ್ತು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಒಂದು ವಾರದೊಳಗೆ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಹಾಗೂ ಪ್ರತಿಭಟನೆನಿರತರಾದ ನಾಗರಾಜ್, ಪುಷ್ಪ, ಪ್ರಸಾದ್,ಒಳಗೊಂಡಂತೆ ಎಲ್ಲ ಪ್ರತಿಭಟನೆನಿರತರು ಒಮ್ಮತದಿಂದ ಸಮಸ್ಯೆ ಬಗೆಹರಿಯುವವರೆಗೂ ನಿರ್ಮಿಸಿದ ಟೆಂಟ್ ಖಾಲಿ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು. ಹಾಗೂ ಈ ಪ್ರತಿಭಟನೆಗೆ ನೆರೆದಿದ್ದ ವೃದ್ಧರು ಮಕ್ಕಳು ಅಧಿಕಾರಿಗಳಿಗೆ ಕೈ ಮುಗಿದು ಭೇಡಿಕೊಂಡರು. ಹಾಗೂ ಈ ಪ್ರತಿಭಟನೆಯ ಸ್ಥಳಕ್ಕೆ ಬಿದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಜತ್ತಿ ಉಪಾಧ್ಯಕ್ಷರಾದ ಸುರೇಶ್ ಗೌಡ ಸದಸ್ಯರಾದ ಸುರೇಶ್ ಮತ್ತು ಯಶೋಧಮಂಜುನಾಥ್ ಕಾಂಗ್ರೆಸ್ ಖಾಂಡ್ಯ ಹೋಬಳಿ ಅಧ್ಯಕ್ಷರಾದ ಬಿ ಸಿ ಮಂಜುನಾಥ್ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್ ಪೇಟೆ ಸತೀಶ್ ಪ್ರಧಾನ ಕಾರ್ಯದರ್ಶಿಯಾದ ಗಣೇಶ್ ದಿನೇಶ್ ಮುಖಂಡರಾದ ದಾನಿಹಳ್ಳಿ ಮಂಜುನಾಥ್, ಗಿರೀಶ್ ಸುಧಾಕರ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶಿಶಿರ, ಇಲಿಯಾಜ್ ರಜಿತ್ ಪಂಚಾಯಿತಿ ಸಮಿತಿ ಅಧ್ಯಕ್ಷರಾದ ವಿನಯ್, ಸ್ಥಳೀಯರಾದ ಯೋಗೀಶ್ ಗೌಡ ಗಂಡಿ,ಚಂದ್ರಶೇಖರ ರೈ ರಘುಪತಿ ವಿ ಸಿ ಬಿದರೆ ಜೋಯಿ, ಸುರೇಶ್, ರಜಿ, ನಾರಾಯಣ, ಜಯರಾಮ್,ಶಶಿಧರ್, ಶಿವದಾಸ್, ರೋಹಿತ್ 

ಭೇಟಿ ನೀಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.









Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?