ರಾಷ್ಟ್ರ ಕವಿಗೆ ಅವಮಾನ,ಸೂಕ್ತ ಕ್ರಮ ಕೈಗೊಳ್ಳಲು ಒಕ್ಕಲಿಗರ ವೇದಿಕೆ ಆಗ್ರಹ,
ರಾಷ್ಟ್ರ ಕವಿಗೆ ಅವಮಾನ,ಸೂಕ್ತ ಕ್ರಮ ಕೈಗೊಳ್ಳಲು ಒಕ್ಕಲಿಗರ ವೇದಿಕೆ ಆಗ್ರಹ,
ಶೃಂಗೇರಿ:- ಕುವೆಂಪು ಅವರ ಕುರಿತು ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದಿರುವ ಆರೋಪಿಗಳ ವಿರುದ್ಧ ಹಾಗೂ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಯುವ ಒಕ್ಕಲಿಗರ ವೇದಿಕೆ ಪದಾಧಿಕಾರಿಗಳು ತಹಶೀಲ್ದಾರ್ ಅವರನ್ನು ಆಗ್ರಹಿಸಿದ್ದಾರೆ .
ಯುಗದಕವಿ , ಜಗದಕವಿ , ವಿಶ್ವ ಮಾನವ ಸಂದೇಶವನ್ನು ಸಾರಿದ ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯನ್ನು ತಿರುಚಿದ ಅಪಮಾನ ಮಾಡಿದ ಆರೋಪ ಹೊಂದಿರುವ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಕುರಿತು ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದ ಲಕ್ಷ್ಮಣ್ ಆಕಾಶ್ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಯುವ ಒಕ್ಕಲಿಗರ ವೇದಿಕೆಯ ಪದಾಧಿಕಾರಿಗಳು ಶೃಂಗೇರಿಯ ತಹಶೀಲ್ದಾರ್ ಅವರನ್ನು ಕೋರಿದರು .
ರೋಹಿತ್ ಚಕ್ರತೀರ್ಥ ಪರಿಷ್ಕರಣೆ ನಡೆಸಿರುವ ಪಠ್ಯವನ್ನು ತಡೆಹಿಡಿದು , ಹಳೇ ಪುಸ್ತಕಗಳನ್ನು ಮಕ್ಕಳಿಗೆ ಒದಗಿಸಬೇಕೆಂದು ಪದಾಧಿಕಾರಿಗಳು ಈ ಸಂದರ್ಭದಲ್ಲಿ ಆಗ್ರಹಿಸಿದರು . ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಹೋದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು . ಈ ಸಂದರ್ಭಲ್ಲಿ ಯುವ ಒಕ್ಕಲಿಗ ವೇದಿಕೆ ತಾಲ್ಲೂಕು ಅಧ್ಯಕ್ಷರಾದ ಶಿರಾಂಕ್ ಹೆಗ್ಡೆ , ಉಪಾಧ್ಯಕ್ಷರಾದ ಅಭಿಲಾಷ್ ಹೆಗ್ಡೆ ಮತ್ತು ಸಚೀಂದ್ರ ಹೊಸ್ತೋಟ , ಸಹಕಾರ್ಯದರ್ಶಿ ಪ್ರಜ್ವಲ್ ಕಿಗ್ಗ , ಖಜಾಂಚಿ ಸುಚನ್ , ಮುಖಂಡರಾದ ಸಂತೋಷ್ ಕಾಳ್ಯ , ಭರತ್ ಗಿಣಕಲ್ , ಶ್ರೀವತ್ಸ , ಪ್ರದೀಪ್ ಕಲ್ಲೊಳ್ಳಿ , ಶ್ರೇಯಸ್ ನೆಮ್ಮಾರ್ , ಅಶೋಕ್ , ಅವಿನಾಶ್ , ಭರತ್ ರಾಜ್ , ಮತ್ತಿತರರಿದ್ದರು .
🖊️ ವೀರಮಣಿ

Comments
Post a Comment