ನಕಲಿ ಸ್ವಾಮೀಜಿಗಳ ಬಂಧನ, ವೇಷ ಹಾಕಿಕೊಂಡು ಸುತ್ತಾಡುತ್ತಿದ್ದ ಮೂವರು ಅರೆಸ್ಟ್
ನಕಲಿ ಸ್ವಾಮೀಜಿಗಳ ಬಂಧನ, ವೇಷ ಹಾಕಿಕೊಂಡು ಸುತ್ತಾಡುತ್ತಿದ್ದ ಮೂವರು ಅರೆಸ್ಟ್
ನೆಲಮಂಗಲ:ಸ್ವಾಮೀಜಿ ವೇಷಭೂಷಣ ತೊಟ್ಟು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ಟಿ.ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ
ಮೂವರು ನಕಲಿ ಮಠಗಳ ಹೆಸರು ಹೇಳಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದರು. ಸ್ವಾಮೀಜಿಯ ವೇಷಭೂಷಣ ತೊಟ್ಟು ನೇರವಾಗಿ ಮನೆಗೆ ನುಗ್ಗುತ್ತಿದ್ದರು.
ಹಣ ಕೊಟ್ಟಿಲ್ಲ ಅಂದರೆ ನಿಂದಿಸಿತ್ತಿದ್ದರು. ಆರೋಪಿಗಳು ವಾರಕ್ಕೊಮ್ಮೆ ಒಂದೊಂದು ಏರಿಯಾದಲ್ಲಿ ಗುರುತಿಸಿಕೊಳ್ಳುತ್ತಿದ್ದರಂತೆ. ಮಲ್ಲಸಂದ್ರಕ್ಕೆ ಬಂದು ಗೂಂಡಾವರ್ತನೆ ತೋರುತ್ತಿದ್ದಾಗಲೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.



Comments
Post a Comment