ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದುವರಿದ ಮಳೆ ; ಜು .6 ರಿಂದ ನಾಲ್ಕು ದಿನಗಳ ಕಾಲ 5 ತಾಲೂಕಿನ ಶಾಲೆಗಳಿಗೆ ರಜೆ,


 ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದುವರಿದ ಮಳೆ ; ಜು .6 ರಿಂದ ನಾಲ್ಕು ದಿನಗಳ ಕಾಲ 5 ತಾಲೂಕಿನ ಶಾಲೆಗಳಿಗೆ ರಜೆ,


 ಜಿಲ್ಲೆಯಲ್ಲಿ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಮುಂದಿನ ನಾಲ್ಕು ದಿನಗಳ ಮಲೆನಾಡು ಭಾಗದ ಶಾಲಾಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶವನ್ನು ಹೊರಡಿಸಿದ್ದಾರೆ .


ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿದ್ದು , ಕಳಸ , ಕೊಪ್ಪ , ಶೃಂಗೇರಿ , ಎನ್.ಆರ್ ಪುರ , ಮೂಡಿಗೆರೆ ಹಾಗೂ ಚಿಕ್ಕಮಗಳೂರು ತಾಲೂಕಿನ ಅಂಬಳೆ , ಲಕ್ಯ ಹೋಬಳಿಗಳನ್ನು ಬಿಟ್ಟು ಉಳಿದ ಭಾಗಕ್ಕೆ ರಜೆಯನ್ನು ಘೋಷಿಸಿದ್ದಾರೆ . ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತೀರುವ ಕಾರಣ ಶೈಕ್ಷಣಿಕ ಸಂಸ್ಥೆಗಳಾದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜು .06 ರಿಂದ 9 ರ ವರೆಗೆ ರಜೆಯನ್ನು ನೀಡಲಾಗಿದೆ .






🖋ಮಜೀದ್ ಕೊಪ್ಪ


Comments

Popular posts from this blog

ಕೊಪ್ಪ, ಶಾಲೆಯ ಮಕ್ಕಳನ್ನ ಅಟೋ ಚಾಲಕರ ಸೀಟಿನಿಂದ ಇಳಿಸಿದ ಪಿ ಎಸ್ ಐ ಬಸವರಾಜ್, ಚಾಲಕರಿಗೆ ಎಚ್ಚರಿಕೆ

250ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್‌ನಲ್ಲಿ ಪತನ,!