ಮಳೆ ಹಾನಿಗೊಳಗಾದ ಗ್ರಾಮಗಳಿಗೆ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಭೇಟಿ.,
ಆಗುಂಬೆ:ಮಳೆ ಹಾನಿಗೊಳಗಾದ ಗ್ರಾಮಗಳಿಗೆ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಭೇಟಿ.,
ಶಿವಮೊಗ್ಗ :ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿಯಲ್ಲಿ ಗಾಳಿ ಮಳೆಯಿಂದ ಮನೆ ಬಿದ್ದಂತಹ ಗ್ರಾಮಗಳಿಗೆ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಗುರುವಾರ ಭೇಟಿ ನೀಡಿದರು.
ಹೊನ್ನೇತಾಳು ಗ್ರಾ ಪಂ ವ್ಯಾಪ್ತಿಯ ಶಿರೂರು ಗ್ರಾಮದ ತನುಜಾ ರಾಘವೇಂದ್ರ ,ಜಾವಗಲ್ ಕುಮಾರಗೌಡರ ಇತ್ತೀಚೆಗೆ ವಯೋ ಸಹಜತೆಯಿಂದ ಮೃತರಾಗಿದ್ದು ಅವರ ಮನೆಗೆ ಭೇಟಿ ನೀಡಿದ್ದಾರೆ.ನೀಲಮ್ಮ ನಾಗಪ್ಪ ಹುಂಚಿಕೊಪ್ಪ ,ಬೆಳ್ಳೂರು ಮಂಜಪ್ಪ ನಾಯ್ಕ್ ,ಬಿದರಗೋಡು ಗ್ರಾ .ಪಂ ವ್ಯಾಪ್ತಿಯ ವಾಸುದೇವ್ ಗಿಡ್ಡ ನಾಯ್ಕ್ ಕೆರೆಬೈಲ್.ಬಾಳೆಹಳ್ಳಿ ವಿ.ಆರ್. ಶಿವಾನಂದ್ ರಾಮಪ್ಪ ಹೆಗ್ಡೆ ವಿ.ಎಚ್,ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾದ ಹೊಸಳ್ಳಿಸುಧಾಕರ್ ಅವರ ತಾಯಿ ಅವರ ಆರೋಗ್ಯ ವಿಚಾರಿಸಿ ನಂತರ, ಬಿದರಗೋಡು ನೂತನ ಗ್ರಾ.ಪಂ ಅಧ್ಯಕ್ಷರಾಗಿ ಮುತ್ತು ವಳ್ಳಿ ವೆಂಕಟೇಶ್ ಅವರಿಗೆ ಸನ್ಮಾನಿಸಲಾಯಿತು.ಬಾಳೆಹಳ್ಳಿ ಗ್ರಾಮದ ಉಳು ಮಡಿ ಕೃಷ್ಣಮೂರ್ತಿ,ಸುರೇಶ್ ಹಾಗೂ ಮಲ್ಲಂದೂರು ಕಾಡಾನೆಯಿಂದ ಅಡಿಕೆ ತೋಟಕ್ಕೆ ಹಾನಿಯಾದ ಸ್ಥಳಕ್ಕೆ ಭೇಟಿ ನೀಡಿದ್ದು.ಈ ಸಂದರ್ಭದಲ್ಲಿ ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆಸ್ತೂರ್ ಮಂಜುನಾಥ್,ಬಾಳೇಹಳ್ಳಿ ಪ್ರಭಾಕರ್ ಹೊನ್ನೇತಾಳು ಗ್ರಾ.ಪಂ ಸದಸ್ಯರಾದ ಭಾಗ್ಯ ಪಡುವಳ್ಳಿ ಹರ್ಷೇಂದ್ರಕುಮಾರ್,ಕುಂದಾದ್ರಿ ರಾಘವೇಂದ್ರ,ಜಾವಗಲ್ ರಾಮಸ್ವಾಮಿ,ಎಂ. ಆರ್. ವೆಂಕಟೇಶ್ ಹೆಗ್ಡೆ ,ಹೆಮ್ಮನೆ ಮಂಜುನಾಥ್ ಗೌಡ್ರು,ಬಾಳೆಹಳ್ಳಿ ರವೀಶ್, ಅಗಸರಕೋಣೆ ಲಕ್ಷ್ಮಣ್ ನಾಯ್ಕ,ಮಹೇಶ್, ಜಯಣ್ಣ ಹೆಗ್ಡ,ಬಿದರಗೋಡು ವೆಂಕಟೇಶ್ ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.
🖋 ವೀರಮಣಿ,

Comments
Post a Comment