ಕುಡಿದು ತೂರಾಡಿದ ಕಾಲೇಜ್,ಹುಡುಗ ಹುಡುಗಿಯರ ವಿಡಿಯೋ ವೈರಲ್
ಎಣ್ಣೆ ಕುಡಿದು ತೂರಾಡಿದ ಕಾಲೇಜಿನ ವಿದ್ಯಾರ್ಥಿಗಳು,ತೂರಾಡಿದ ವಿಡಿಯೋ ಸೆರೆ ಹಿಡಿದ ಸಹಪಾಠಿಗಳು ಎಲ್ಲೆಡೆ ವೈರಲ್ .
ಶಿವಮೊಗ್ಗದ ಪ್ರತಿಷ್ಠಿತ ಪಿಇಎಸ್ ಕಾಲೇಜಿನಲ್ಲಿ ಘಟನೆ.ತೀರ್ಥಹಳ್ಳಿಯಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ.
ತೀರ್ಥಹಳ್ಳಿ:-ಶಿವಮೊಗ್ಗದ ಪ್ರತಿಷ್ಠಿತ ಪಿಇಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು
ಮದ್ಯ ಸೇವನೆ ಮಾಡಿ ಕಾಲೇಜಿನ ಕ್ಯಾಂಪಸ್ ನೊಳಗಿರುವ ಮಹಿಳಾ ಹಾಸ್ಟೆಲ್ ಪಕ್ಕದ ರಸ್ತೆಗಳಲ್ಲಿ ಓಡಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಾಲೇಜು ಕ್ಯಾಂಪಸ್ ವಿಭಾಗದ ಮುಖ್ಯಸ್ಥರು ಘಟನೆ ನಡೆದಿರುವುದು ನಿಜ
ಈಗಾಗಲೇ ಈ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದ್ದು
ಕಾಲೇಜಿನ ಎದುರು ಭಾಗದ ಬಾರೊಂದರಲ್ಲಿ ಮದ್ಯ ಸೇವನೆ ಮಾಡಿರುವ ಬಗ್ಗೆ ಮಾಹಿತಿ ಇದ್ದು ಸೂಕ್ತ ಕ್ರಮಕ್ಕೆ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತೀರ್ಥಹಳ್ಳಿಯ ಶಾಲಾ ಕಾಲೇಜ್ ಸಮೀಪದ ಅಕ್ಕಪಕ್ಕದ ಅಂಗಡಿಗಳಲ್ಲಿ,ಕೆಲ ಬಾರ್, ಹೋಟೆಲ್ ಗಳಲ್ಲಿ ಅಪ್ರಾಪ್ತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಗುಟ್ಕಾ, ಸಿಗರೇಟ್ ,ಮದ್ಯ ನೀಡುತ್ತಿರುವ ಬಗ್ಗೆ ಸಾಕಷ್ಟು ಬಾರಿ ತೀರ್ಥಹಳ್ಳಿ ಮಿತ್ರ ಮಾಹಿತಿ ನೀಡಿದರೂ ಈವರೆಗೂ ಕ್ರಮ ಕ್ರಮ ಕೈಗೊಳ್ಳದ ಅಧಿಕಾರಿಗಳು,
ಮುಂದಾದರು ಇಂತಹ ಘಟನೆಗಳು ನಡೆದಾಗ ಎಚ್ಚೆತ್ತುಕೊಳ್ಳುತ್ತಾರ ಕಾದು ನೋಡಬೇಕಿದ್ದು ಕೆಲ ಸ್ಥಳೀಯ ಸಾರ್ವಜನಿಕರ ಮಾಹಿತಿ ಪ್ರಕಾರ ಕೆಲ ಅಧಿಕಾರಿಗಳು ಇಂತಹ ಅಂಗಡಿಯವರು ಮಾಮೂಲಿ ಫಿಕ್ಸ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.
🖋ವೀರಮಣಿ
ಈ ಬಗ್ಗೆ ಹಿರಿಯ ಅಧಿಕಾರಿಗಳು
ತಮ್ಮ ಹಣದ ಆಸೆಗೆ ಇಂತಹ ಅಪ್ರಾಪ್ತ ಯುವಕರನ್ನು ದಾರಿ ತಪ್ಪಿಸಿ ಅವರನ್ನು ವ್ಯಸನಿಗಳಾಗುವಂತೆ ಮಾಡುವ
ಉದ್ದಿಮೆದಾರರು ಮತ್ತು ಇಲಾಖೆಯ ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.

Comments
Post a Comment