ಡಿವೈಎಸ್ಪಿ ಹುದ್ದೆಯಿಂದ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಎಂ ಎ ನಟರಾಜ್ ಮಂಗಳ ಪದೋನ್ನತಿ.


-ತೀರ್ಥಹಳ್ಳಿ ತಾಲೂಕಿಗೆ ಮತ್ತೊಂದು ಗರಿ

-ಎಲ್ಲೆಡೆ ನಟರಾಜ್ ರವರಿಗೆ ಮೆಚ್ಚುಗೆ 

 


ಶಿವಮೊಗ್ಗ :ತೀರ್ಥಹಳ್ಳಿ ತಾಲೂಕಿನ ಕೊಣಂದೂರು ಸಮೀಪದ ಮಂಗಳದ ಶ್ರೀ ಅಣ್ಣಪ್ಪ ಗೌಡ್ರು ಮತ್ತು ಶ್ರೀಮತಿ ಕಮಲಮ್ಮ ಅವರ ಸುಪುತ್ರ ಎಂಎ ನಟರಾಜ್ ಅವರು ಪಿಎಸ್ಐ ಮೂಲಕ ಪೋಲಿಸ್ ಇಲಾಖೆಗೆ ಸೇರಿ ಶೃಂಗೇರಿ,ಸಾಗರ,ದಾವಣಗೆರೆ ಚಿತ್ರದುರ್ಗ,ಬೆಂಗಳೂರು ಸುರತ್ಕಲ್,  ಮಂಗಳೂರಿನಲ್ಲಿ  ಪೋಲಿಸ್ ಇಲಾಖೆಯ  ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಸಾರ್ವಜನಿಕ ಮೆಚ್ಚುಗೆಯ ಪಾತ್ರರಾಗಿದ್ದು, ಇಲಾಖೆಯ  ಪ್ರಶಂಸೆಗೂ ಕಾರಣರಾಗಿದ್ದಾರೆ.


ಎಂ ಎ  ನಟರಾಜ್ ಅವರು ಶೃಂಗೇರಿ ಸಮೀಪದ ಮೆಣಸಿನಹಾಡ್ಯದಲ್ಲಿ ನಡೆದ ನಕ್ಸಲ್ ನಾಯಕ ಸಾಕೆತ್ ರಾಜನ್  ಎನ್ಕೌಂಟರ್ ಮಾಡಿದ ಒಂದು ತಂಡದ ಮುಖ್ಯಸ್ಥರಾಗಿದ್ದರು ಎನ್ನುವುದು ಸಹ ತೀರ್ಥಹಳ್ಳಿ ಜನತೆಗೆ ಅತ್ಯಂತ ಪ್ರಶಂಸನೀಯ  ವಿಚಾರ,ಪ್ರಸ್ತುತ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ, ಬಳ್ಳಾರಿ ಜಿಲ್ಲೆಗೆ ಪದೋನ್ನತಿ ಗೊಂಡಿದ್ದು ಮುಂದಿನ ಅವರ ವೃತ್ತಿ ಜೀವನ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇವೆ...‌



ಸಂಗ್ರಹ:-ವೀರಮಣಿ

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?