ಕೊಪ್ಪ, ರಾಘವೇಂದ್ರ ನಗರದ ನೂರುಲ್ ಆಲಂ ಜುಮ್ಮಾ ಮಸೀದಿಯಲ್ಲಿ,ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಕೊಪ್ಪ, ರಾಘವೇಂದ್ರ ನಗರದ ನೂರುಲ್ ಆಲಂ ಜುಮ್ಮಾ ಮಸೀದಿಯಲ್ಲಿ,ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಮಸೀದಿಯ ಕಾರ್ಯದರ್ಶಿಗಳಾದ ಶಫಿ ಅಹ್ಮದ್ ರವರು, ಸ್ವಾಗತಾ ಭಾಷಣವನ್ನು ಕೋರಿದರು.
ಕಾರ್ಯಕ್ರಮದ ಗೌರವಾಧ್ಯಕ್ಷತೆನ್ನು ವಹಿಸಿದ್ದ ಅಹ್ಮದ್ ಹಾಜಿಯವರ ನೇತೃತ್ವದಲ್ಲಿ ಧ್ವಜಾರೋಹಣವನ್ನು ನೆರವೇರಿಸಲಾಯಿತು.
ಸಮವಸ್ತ್ರಧಾರಿಗಳಾಗಿದ್ದ ಮದರಸ ಮಕ್ಕಳೊಂದಿಗೆ, ಸಭಿಕರೆಲ್ಲರೂ ರಾಷ್ಟ್ರಗೀತೆಯನ್ನು ಹಾಡುವುದರ ಮೂಲಕ ರಾಷ್ಟ್ರಧ್ವಜಕ್ಕೆ ಗೌರವಾರ್ಪಿಸಿದರು.
ಮಸೀದಿಯ ಮುಖ್ಯ ಗುರುಗಳಾದ ಅಬ್ದುಲ್ಲ ದಾರಿಮಿ ಸ್ವಾತಂತ್ರ್ಯೋತ್ತರ ಭಾರತದ ಚರಿತ್ರೆಯನ್ನು ನೆನಪಿಸುತ್ತಾ,ಸ್ವಾತಂತ್ರ್ಯಕ್ಕಾಗಿ ಜೀವವನ್ನು ಮುಡಿಪಾಗಿಟ್ಟ ಹೋರಾಟಗಾರರಿಗೆ ಪ್ರಾರ್ಥಿಸುವುದರ ಮೂಲಕ ಗೌರವ ನಮನಗಳನ್ನು ಸಲ್ಲಿಸಿ ಮಾದರಿಯಾದರು.
ಮಸೀದಿಯ ಅಧ್ಯಕ್ಷರಾಗಿದ್ದ ಹಂಝ ಏ.ಬಿ.ಏ ,ಉಪಾಧ್ಯಕ್ಷರಾದ ಅಬ್ದುರ್ರಹ್ಮಾನ್ ನಾರ್ವೆ(ಅದ್ಧಾಕ),ಖಜಾಂಚಿಗಳು
ಹಾಗೂ ಗ್ರಾಮಪಂಚಾಯತಿ ಮಾಜಿ ಉಪಾಧ್ಯಕ್ಷರು,ಹಾಲಿ ಸದಸ್ಯ ಸ್ಥಾನವನ್ನು ಅಲಂಕರಿಸಿರುವ ಫೈರೋಝ್,ಗ್ರಾಮಪಂಚಾಯತಿ ಸದಸ್ಯರುಗಳಾದ ಪದ್ಮ ಟೀಚರ್,ಶೃತಿಯವರುಗಳು ಸಭೆಯನ್ನುದ್ದೇಶಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಲಘುಉಪಹಾರದೊಂದಿಗೆ ಸಿಹಿ ಹಂಚಲಾಯಿತು.
✒️...ಮುಹಮ್ಮದ್ ಸುಫೈದ್ ಕೊಪ್ಪ




Comments
Post a Comment