ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅರಳಿಕೊಪ್ಪ ನಿವಾಸಿ ಸುರೇಶ್ ಕೆ.ಕೆ ಎಂಬುವವರ ಮನೆಯ ಗಾಡೇಜ್ ಬೀರುವಿನಲ್ಲಿ ಇಡಲಾಗಿದ್ದ ಚಿನ್ನದ ಸರ , ಕಿವಿ ಓಲೆ , 03 ಉಂಗುರಗಳು , 1 ಗ್ರಾಂ ನ ಗುಂಡು , ಕಿವಿಯ ಬುಗುಡಿ , ಹಾಗೂ 35000 ರೂಪಾಯಿ ನಗದನ್ನು ಕಳ್ಳತನ ನಡೆಸಿ ಎಸ್ಕೆಪ್ ಆಗಿದ್ದಾರೆ ಎಂಬುದಾಗಿ ಮನೆಯವರು ದೂರು ನೀಡಿದ್ದಾರೆ .
ಯಾವುದೇ ಸುಳಿವು ಅಥವಾ ಕಳ್ಳತನ ಆದ ಕುರಿತಾದ ಯಾವುದೇ ಮಾಹಿತಿಗಳು ಲಭ್ಯವಾಗದಂತೆ ಕಳ್ಳರು ಕೈಚಳಕ ತೋರಿದ್ದಾರೆ . ಆಗಸ್ಟ್ 16 ರಂದು ಮನೆಯ ಬೆಡ್ ರೂಮ್ ನಲ್ಲಿರುವ ಗಾಡೇಜ್ ಬೀರೂವನ್ನು ಸುರೇಶ್ ಅವರು ನೋಡಿದಾಗ ಹಣ ಹಾಗೂ ಆಭರಣ ಇಲ್ಲದೇ ಇರುವುದು ಗೊತ್ತಾಗಿದೆ . ಈ ಸಂಬಂಧ ಬಾಳೆಹೊನ್ನೂರು ಠಾಣೆಗೆ ದೂರು ನೀಡಿರುವ ಅವರು ಆಗಸ್ಟ್ 10 ರಿಂದ 16 ರ ಬೆಳಗ್ಗೆ 7.30 ರ ಒಳಗೆ ಕಳ್ಳತನ ನಡೆದಿದೆ , ಅಂದಾಜು 175,500 ರೂಪಾಯಿ ಮೌಲ್ಯದ ಒಡವೆಗಳು ಹಾಗೂ 35,000 ರೂಪಾಯಿ ನಗದು ಇವುಗಳನ್ನು ಕಳ್ಳರು ಕದ್ದೊಯ್ದಿದ್ದು ಈ ಕೃತ್ಯವನ್ನು ಎಸಗಿದ ಕಳ್ಳನನ್ನು ಪತ್ತೆ ಮಾಡಿ ಕಳುವಾಗಿರುವ ವಸ್ತುಗಳನ್ನು ಪತ್ತೆ ಮಾಡಿಕೊಡಬೇಕೆಂದು ದೂರು ನೀಡಿದ್ದಾರೆ . ಘಟನಾ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಬಾಳೆಹೊನ್ನೂರು ಠಾಣೆಯ ಪೊಲೀಸರು ಈ ಸಂಬಂಧ ಹೆಚ್ಚಿ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ,
🖊️ ವೀರಮಣಿ ಬಾಳೆಹೊನ್ನುರು

Comments
Post a Comment