ತನ್ನ ಆರಾಧ್ಯದೈವ ಶಿವರಾಜ್ ಕುಮಾರ್ ಅವರನ್ನು ಭೇಟಿಯಾದ ಕಾಫಿನಾಡು ಚಂದು - ಶಿವಣ್ಣನ ಮುಂದೆ ನಿಂತು ಹಾಡು ಹಾಡಿದ ಕಾಫಿನಾಡು ಚಂದು,
ಕಾಫೀ ನಾಡು ಚಂದು ಬಹುಶಃ ಇದೊಂದು ಹೆಸರು ಕೇಳದವರು ಯಾರೂ ಇರಲಿಕ್ಕಿಲ್ಲ. ಯಾಕೆಂದರೆ ಅಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿದ್ದಾನೆ ಚಿಕ್ಕಮಗಳೂರಿನ ಈ ಸಾಮಾನ್ಯ ಆಟೋ ಚಾಲಕ. ಮಾತೆತ್ತಿದರೆ ನಾನು ಶಿವಣ್ಣ ಮತ್ತು ಪುನೀತಣ್ಣನವರ ಅಭಿಮಾನಿ ಎಂದು ಹೇಳುತ್ತಾ ತನ್ನ ವಿಚಿತ್ರ ಬರ್ತ್ ಡೇ ಸಾಂಗ್ ಗಳಿಂದ ಸೋಶಿಯಲ್ ಮೀಡಿಯಾಗಳಲ್ಲಿ ರಾತ್ರೋ ರಾತ್ರಿ ಸ್ಟಾರ್ ಆದವರು ಕಾಫಿ ನಾಡು ಚಂದು.ಇವರು ಜನಪ್ರಿಯತೆ ಎಷ್ಟರ ಮಟ್ಟಿಗೆ ಇದೆ ಎಂದರೆ ಈ ಬಾರಿಯ ಬಿಗ್ ಬಾಸ್ ಗೆ ಇವರು ಹೋಗೋದು ಪಕ್ಕಾ ಎಂದು ಹೇಳಲಾಗ್ತಾ ಇತ್ತು. ಆದರೆ ಈ ಬಾರಿಯ ಬಿಗ್ ಬಾಸ್ ನಲ್ಲಿ ಚಂದು ಹೆಸರು ಮಿಸ್ ಆದರೂ ಅವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಅಥವಾ ಟಿವಿ ಬಿಗ್ ಬಾಸ್ ಗೆ ಹೋಗೇ ಹೋಗ್ತಾರೆ ಅಂತ ಅವರ ಅಭಿಮಾನಿಗಳು ಭರವಸೆ ಇಟ್ಟಿದ್ದಾರೆ.
ಇತ್ತೀಚಿಗೆ ಕಾಫೀ ನಾಡು ಚಂದು ನಾನು ಎಷ್ಟೇ ವಿನಂತಿ ಮಾಡಿದರೂ ನನ್ನನ್ನು ನನ್ನ ಆರಾಧ್ಯ ದೈವ ಶಿವಣ್ಣನಿಗೆ ಒಮ್ಮೆಯೂ ಭೇಟಿ ಮಾಡಿಸಿಲ್ಲ ಎಂದು ಅಳುತ್ತ ಒಂದು ವಿಡಿಯೋ ಮಾಡಿದ್ದರು. ಅದಕ್ಕಾಗಿ ಅವರು ಆ್ಯಂಕರ್ ಅನುಶ್ರೀ ಅವರಿಗೆ ದುಂಬಾಲು ಬಿದ್ದಿದ್ದರು. ಈ ವಿಡಿಯೋ ಕೂಡ ತುಂಬಾ ವೈರಲ್ ಆಗಿತ್ತು . ಇದೀಗ ಅವರ ಬಹುದಿನದ ಕನಸು ಅವರ ಆರಾಧ್ಯ ದೈವ ಹ್ಯಾಟ್ರಿಕ್ ಹೀರೋ ಶಿವಣ್ಣನನ್ನು ಭೇಟಿ ಮಾಡುವ ಸುದಿನ ಕಾಫೀ ನಾಡು ಚಂದು ಗೆ ಬಂದಿದೆ. ಅದೂ ಕೂಡ ಕರ್ನಾಟಕದ ಜನಪ್ರಿಯ ಡಾನ್ಸ್ ರಿಯಾಲಿಟಿ ಶೋ ಮೂಲಕ,

Comments
Post a Comment