ಕೊಪ್ಪ,ಆಟೋ ಚಾಲಕ ಪ್ರದೀಪ್ ಸಾವಿನ ಸುತ್ತ ಅನುಮಾನಗಳ ಹುತ್ತ,
ಆಟೋ ಚಾಲಕ ದೀಪ್ ಸಾವು ಅನುಮಾನಕ್ಕೆ ಕಾರಣವಾಗಿದೆ . ಇದೊಂದು ಪೂರ್ವ ಯೋಜಿತ ಕೃತ್ಯವಾಗಿದೆ ? . ಕೂಡಲೇ ತನಿಖೆ ನಡೆಸಿ ದೀಪಕ್ ಸಾವಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಆಟೋ ಚಾಲಕರು ಕೊಪ್ಪ ಪೊಲೀಸ್ ಠಾಣೆ ಎದುರು ಜಮಾಯಿಸಿ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು,
ಶುಕ್ರವಾರ ರಾತ್ರಿಯಿಂದ ನಾಪತ್ತೆಯಾಗಿದ್ದ ಚೌಕಿ ಸಮೀಪದ ಕೆಸವೆ ಗ್ರಾಮದ ಆಟೋ ಚಾಲಕ ಪ್ರದೀಪ್ ಸಿ . ( ಚೌಕಿ ಪ್ರದೀಪ್ ) ( 36 ) ಅವರ ಮೃತದೇಹ ಇಂದು ಕೆಸವೆಗೆ ತೆರಳುವ ಮಾರ್ಗದಲ್ಲಿನ ಚೌಕಿ ಲೇಔಟ್ ಸಮೀಪ ಮುಸುರೇಹಳ್ಳದಲ್ಲಿ ಪತ್ತೆಯಾಗಿದೆ . ಸಾವಿಗೆ ನಿಖರ ಕಾರಣಗಳು ತಿಳಿದುಬಂದಿಲ್ಲ . ಪ್ರದೀಪ್ ಸಾವಿನ ಕುರಿತಾಗಿ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
🖋 ಮಜೀದ್ ಕೊಪ್ಪ,

Comments
Post a Comment