ಸಾಲ ಪಡೆದ ಸ್ನೇಹಿತನ ರುಂಡ ಚೆಂಡಾಡಿದ, ಸ್ನೇಹಿತ .. !
ಸಾಲ ಪಡೆದ ಸ್ನೇಹಿತನ ರುಂಡ ಚೆಂಡಾಡಿದ, ಸ್ನೇಹಿತ .. !
ಬೆಳಗಾವಿ : ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ . ನಿನ್ನೆ ಸಾಯಂಕಾಲ ತಾರಿಹಾಳದ ಶಿಂದೊಳ್ಳಿ ಮಠ ಗಲ್ಲಿಯ ಗದಗಯ್ಯ ಹಿರೇಮಠ ( 40 ) ಎಂಬಾತನನ್ನು ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು . ಇನ್ನೂ ಕೊಂಡಸಕೊಪ್ಪ ಗ್ರಾಮದ ವಿಠಲ ಸಾಂಬ್ರೆಕರ ಎಂಬಾತನೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ .
ಗದಗಯ್ಯ ಹಾಗೂ ವಿಠಲ ಇಬ್ಬರು ಸ್ನೇಹಿತರಾಗಿದ್ದರು . ಇನ್ನೂ ಗದಗಯ್ಯ , ವಿಠಲನ ಹತ್ತಿರ 2 ಲಕ್ಷ ರೂಪಾಯಿ ಪಡೆದಿದ್ದನು . ಆದರೆ ಹಣ ಪಡೆದು 2 ವರ್ಷವಾದರೂ ವಾಪಸ್ಸು ಕೊಟ್ಟಿರಲಿಲ್ಲ ಎನ್ನಲಾಗುತ್ತಿದೆ . ಇದರಿಂದ ಸಿಟ್ಟಾದ ವಿಠಲ 2 ತಿಂಗಳಿನಿಂದ ಗದಗಯ್ಯನ ಕೊಲೆಗೆ ಸ್ಕೆಚ್ ಹಾಕಿದ್ದನು ಎಂದು ತಿಳಿದು ಬಂದಿದೆ .

Comments
Post a Comment