ನ್ಯಾಮತಿ :ಮಹಿಳೆ ಕೊಂದ ಚಿರತೆ ಸೆರೆ.
ನ್ಯಾಮತಿ: ತಾಲ್ಲೂಕಿನ ಫಲವನಹಳ್ಳಿ ಗ್ರಾಮದಲ್ಲಿ ಮಹಿಳೆಯನ್ನು ಕೊಂದ ಚಿರತೆ ವಾರದ ನಂತರ ಬೋನಿನಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆಯವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಚಿರತೆ ಸೆರೆಗೆ ಸತತ ಕಾರ್ಯಾಚರಣೆ ನಡೆಸಿದ್ದ ಸಿಬ್ಬಂದಿ ಮೊದಲಿಗೆ ಮಹಿಳೆಯನ್ನು ಕೊಂದ ಸ್ಥಳದಲ್ಲಿ 7 ಬೋನುಗಳು, 7 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು.ನಂತರ ಅಕ್ಕಪಕ್ಕದ ಗ್ರಾಮಗಳಲ್ಲಿ ಹೆಜ್ಜೆಗುರುತು ಕಂಡು ಬಂದ ಕಾರಣ ಬೋನುಗಳನ್ನು ಸ್ಥಳಾಂತರಿಸಿದ್ದರು.ಶಿವಮೊಗ್ಗ ಮೀಸಲು ಅರಣ್ಯ ಆಲದಹಳ್ಳಿ ವಲಯದ ಬೋನಿಗೆ ಮಂಗಳವಾರ ಮುಂಜಾನೆ ಚಿರತೆ ಬಿದ್ದಿದ್ದು, ಹೆಜ್ಜೆಯ ಗುರುತಿನ ಆಧಾರದ ಮೇಲೆ ಮಹಿಳೆಯನ್ನು ಕೊಂದ ಗಂಡು ಚಿರತೆ ಇದೇ ಎಂದು ಗುರುತಿಸಲಾಗಿದೆ.ಕಾರ್ಯಾಚರಣೆ ವೇಳೆ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನಕುಮಾರ, ಹೊನ್ನಾಳಿ ವಲಯ ಅರಣ್ಯಾಧಿಕಾರಿ ಕೆ.ಆರ್. ಚೇತನ್, ಉಪ ವಲಯ ಅರಣ್ಯಾಧಿಕಾರಿಗಳಾದ ಬರ್ಕತ್ ಅಲಿ ಮತ್ತು ಶಿವಯೋಗಿ, ಅರಣ್ಯ ರಕ್ಷಕರಾದ ಕೃಷ್ಣಮೂರ್ತಿ, ಲಿಂಗರಾಜ ಮತ್ತು ಅರಣ್ಯ ನಿರೀಕ್ಷ ಚಂದ್ರಪ್ಪ, ಶಿವಮೊಗ್ಗ ಅರಣ್ಯ ಮತ್ತು ಶಂಕರ ವಲಯ ಅರಣ್ಯಾಧಿಕಾರಿ, ಸಿಬ್ಬಂದಿ ಇದ್ದರು.
🖊️ ವೀರಮಣಿ ಬಾಳೆಹೊನ್ನುರು,

Comments
Post a Comment