ಅಕ್ರಮ ಮಾದಕ ವಸ್ತು ಸೇವನೆ,ವ್ಯಕ್ತಿಯ ಬಂಧನ,,
ಎನ್.ಆರ್.ಪುರ:- ಬಿ . ಹೆಚ್ . ಕೈ ಮರದ ಸಾರ್ವಜನಿಕ ಸ್ಥಳದಲ್ಲಿ ಸಂತೋಷ ಬಿನ್ ವೇಲಾಯುಧನ್ , ವಾಸ ಅಯ್ಯಪ್ಪ ನಗರ , ವಾಸ ಬಿ.ಹೆಚ್ . ಕೈಮರ ನ.ರಾ. ಪುರ ಈತನು ಅಕ್ರಮವಾಗಿ ಮಾದಕ ವಸ್ತುವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ , ಸದರಿ ಆಸಾಮಿಯನ್ನು ವಶಕ್ಕೆ ಪಡೆದು , ಸದರಿ ಆಸಾಮಿಯು ಮಾದಕ ವಸ್ತುವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು , ಆರೋಪಿ ವಿರುದ್ಧ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ . ಈ ಕಾರ್ಯಾಚರಣೆಗಳಲ್ಲಿ ಎನ್.ಆರ್.ಪುರ ಪೊಲೀಸ್ ಠಾಣಾ ಪಿ . ಎಸ್.ಐ.ದಿಲೀಪ್ ಕುಮಾರ್ ವಿ.ಟಿ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿದ್ದಾರೆ .
🖋ಮಜೀದ್ ಕೊಪ್ಪ,

Comments
Post a Comment