ಗ್ಯಾಸ್ ಕಟರ್ ನಿಂದ ಕಿಟಕಿಯ ರಾಡು ತುಂಡರಿಸಿ ಲಕ್ಷಾಂತರ ರೂಪಾಯಿ ಹಣವನ್ನು ಎಗರಿಸಿದ ಖದೀಮರು,
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಿರೇಗದ್ದೆ ಇಲ್ಲಿನ ಕಿಟಕಿಯ ಸರಳುಗಳನ್ನು ಗ್ಯಾಸ್ ಕಟರ್ ನಿಂದ ತುಂಡುಮಾಡಿ , ಕಳ್ಳರು ಆಫೀಸಿನ ಕ್ಯಾಶ್ ಬೋರ್ಡ್ ನಲ್ಲಿದ್ದ 325,000 ರೂಪಾಯಿ ನಗದು ಹಾಗೂ 8000 ರೂಪಾಯಿ ಬೆಲೆ ಬಾಳುವ ಹಾರ್ಡ್ ಡಿಸ್ಕ್ ನ್ನು ಕಳ್ಳತನ ನಡೆಸಿದ್ದಾರೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ್ ಕುಮಾರ್ ಜಿ.ಆರ್ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ .
ಸ್ವಾತಂತ್ರ್ಯ ದಿನಾಚರಣೆಯಾದ ನಿನ್ನೆ ಇಲ್ಲಿನ ಪದಾಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಧ್ವಜಾರೋಹಣ ನಡೆಸಿ ಬೆಳಗ್ಗೆ 10.30 ಕ್ಕೆ ನಿರ್ಗಮಿಸಿದ್ದು ಈ ಅವಧಿಯಿಂದ ಇಂದು ಬೆಳಗ್ಗೆ 10.30 ರ ಒಳಗಿನ ಅವಧಿಯಲ್ಲಿ ಕಳ್ಳರು ಹಣವನ್ನು ದೋಚಿರಬಹುದು ಎನ್ನಲಾಗಿದೆ . ಘಟನಾ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು , ಪ್ರಕರಣದ ಸಂಬಂಧ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು ತನಿಖೆಯ ಬಳಿಕವಷ್ಟೇ ಈ ಕುರಿತಾದ ಸಂಪೂರ್ಣ ಮಾಹಿತಿ ಹೊರಬೀಳಲಿದೆ .
🖊️ ವೀರಮಣಿ,ಬಾಳೆಹೊನ್ನುರು

Comments
Post a Comment