ಬೆಳೆಹಾನಿ ಹಾಗೂ ಮನೆ ಹಾನಿ ಪರಿಹಾರಕ್ಕೆ 3600ಕೋಟಿ ರೂ ಅನುದಾನ ಬಿಡುಗಡೆಗೆ.


 

ಬೆಳೆಹಾನಿ ಹಾಗೂ ಮನೆ ಹಾನಿ ಪರಿಹಾರಕ್ಕೆ 3600ಕೋಟಿ ರೂ ಅನುದಾನ ಬಿಡುಗಡೆಗೆ ಸರ್ಕಾರ ಅಸ್ತು.



 ಬೆಂಗಳೂರು:-ಕರ್ನಾಟಕದಲ್ಲಿ ಮಳೆಯಿಂದ ಉಂಟಾಗಿರುವ ಬೆಳೆ ಹಾನಿ, ಮನೆ ಹಾನಿ ಹಾಗೂ ಮೂಲ ಸೌಕರ್ಯಗಳ ಹಾನಿಯನ್ನು, ಹಾಗೂ ಕುಂದು ಕೊರೆತೆಗಳನ್ನು ಒಟ್ಟು 3600 ಕೋಟಿ ರು.ಗಳಿಗೂ ಹೆಚ್ಚಿನ ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಸದನದಲ್ಲಿ ಸೋಮವಾರ ಮಳೆ ಹಾನಿ ವಿಷಯದ ಮೇಲಿನ ಸುದೀರ್ಘ ಚರ್ಚೆಯಲ್ಲಿ ಮಾತನಾಡಿದ ಸಿ ಎಂ, ಮಳೆಯಿಂದಾಗಿ ಉಂಟಾಗಿರುವ ಅಪಾರ ಹಾನಿ ಸರಿಪಡಿಸಲು ಈ ದೊಡ್ಡ ಮೊತ್ತದ ಅಗತ್ಯವಿದೆ , ಬಜೆಟ್‌ ಪೂರಕ ಅಂದಾಜಿನಲ್ಲಿ ಇದಕ್ಕೆ ಸದನದ ಒಪ್ಪಿಗೆ ಪಡೆದು ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದರು.

ಈಗಿನ ಅಂದಾಜಿನ ಪ್ರಕಾರ ರಾಜ್ಯದಲ್ಲಿ ಈ ಬಾರಿ ಮಳೆಯಿಂದಾಗಿ ಒಟ್ಟು 10.06 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ಬೆಳೆ ಹಾನಿ ಸಂಬಂಧ ರೈತರಿಗೆ ಸೂಕ್ತ ಪರಿಹಾರ ಒದಗಿಸಲು 1550 ಕೋಟಿ ರು. ಅನುದಾನ ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಅದೇ ರೀತಿ ಈ ವರ್ಷ 42,040ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಇವುಗಳಿಗೆ ಪರಿಹಾರ ಒದಗಿಸಲು ಅಂದಾಜು 850 ಕೋಟಿ ರು. ಅಗತ್ಯವಿದೆ ಎಂದರು. ಜೊತೆಗೆ ಹಾಳಾಗಿರುವ ರಸ್ತೆ, ಸೇತುವೆ ಸೇರಿದಂತೆ ಮೂಲ ಸೌಕರ್ಯ ದುರಸ್ತಿ ಕಾರ್ಯಕ್ಕೆ 1200 ಕೋಟಿ ರು. ಬೇಕೆಂದು ಅಂದಾಜು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.



🖋 ವೀರಮಣಿ ಬಾಳೆಹೊನ್ನುರು,


Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?